ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ತಾಂಡವ ಆಡುತ್ತಿದೆ? ಸರಕಾರ ಯಾಕೆ ನೇಮಕಾತಿ ಮಾಡುತ್ತಿಲ್ಲ ಸಂಪೂರ್ಣ ಮಾಹಿತಿ!

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ತಾಂಡವ ಆಡುತ್ತಿದೆ? ಸರಕಾರ ಯಾಕೆ ನೇಮಕಾತಿ ಮಾಡುತ್ತಿಲ್ಲ ಸಂಪೂರ್ಣ ಮಾಹಿತಿ!

 

ಕರ್ನಾಟಕದಲ್ಲಿ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ನೇಮಕಾತಿ ಬಗ್ಗೆ ಯಾವಾಗ ಆಗುತ್ತೆ( Police Recruitment) SDA,FDA,KPSC ,VILLAGE ACCOUNTENT, KAS,PSI,KSRP ,KSRTC ಹೀಗೆ ಹಲವಾರು ಉದ್ಯೋಗದ ಬಗ್ಗೆ ಕಾಯುವ ವಿದ್ಯಾರ್ಥಿಗಳಿಗೆ ನಿರಾಸೆ ಆಗಿದೆ ಈಗ ಪ್ರಸ್ತುತ ಕರ್ನಾಟಕದಲ್ಲಿ 2,85 ಲಕ್ಷ ಉದ್ಯೋಗಗಳು ಖಾಲಿ ಇದೆ.

ನಿಜಕ್ಕೂ ಸರ್ಕಾರ ನಾಚಿಕೆ ಪಡುವ ಸಂಗತಿ ಕಾಂಗ್ರೆಸ್ ಸರಕಾರ 2 ವರ್ಷ 7 ತಿಂಗಳುಗಳಾಯಿತು ಯಾವುದೇ ನೇಮಕಾತಿ ಇಲ್ಲ ಯಾಕೆ? ಯಾವುದೇ ಸಚಿವರು ಈ ವಿದ್ಯಾರ್ಥಿಗಳ ಬಗ್ಗೆ ಮಾತಾಡುತ್ತಿಲ್ಲ ಯಾಕೆ? ಈ ಯುವಕರು ಸರಕಾರ ಕಣ್ಣಿಗೆ ಕಾಣಿಸ್ತಾ ಇಲ್ಲ ಯಾಕೆ? ಎಲ್ಲಾ ಮಾಹಿತಿ ತಿಳಿಯೋಣ!

ಕಾಂಗ್ರೆಸ್ ಸರ್ಕಾರ ಬರೋಕಿಂತ ಮುಂಚಿತ ಕೊಟ್ಟ ಮಾತುಗಳು:

ಕರ್ನಾಟಕ ರಾಜ್ಯದಲ್ಲಿ ಯುವಕರಿಗೆ ಕರ್ನಾಟಕ ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ ಎಂದು ಮಾತು ಕೊಟ್ಟಿದ್ದರು. ಈಗ ಪ್ರಸ್ತುತ ಕಾಂಗ್ರೆಸ್ ಬಂದು 2.7 ವರ್ಷಗಳಾಯಿತು ಆದರೆ ಯಾವುದೇ ನೇಮಕಾತಿ ಮಾಡಿಲ್ಲ ಯಾಕೆ? ಸರಕಾರ ಇದರ ಬಗ್ಗೆ ಸ್ವಲ್ಪ ಎಚ್ಚೆತ್ತುಕೊಳ್ಳಿ ನಿಮ್ಮ ನಿಮ್ಮ ವೈಯಕ್ತಿಕ ಹಣ ಲೂಟಿ ಮಾಡಲು ಪಾಪ ಯುವಕರನ್ನ ದಾರಿ ತಪ್ಪಿಸಬೇಡಿ ಮತ್ತು ಅವರನ್ನು ನಿರುದ್ಯೋಗಿಯನ್ನ ಮಾಡಬೇಡಿ:

ಈಗ ಪ್ರಸ್ತುತ ಕರ್ನಾಟಕದಲ್ಲಿ ಎಲ್ಲಾ ಇಲಾಖೆಗಳಲ್ಲಿ 2,85 ಲಕ್ಷ ಉದ್ಯೋಗಗಳು ಖಾಲಿಯಿದೆ ಸರಕಾರದಲ್ಲೇ ಈ ನೇಮಕಾತಿ ಮಾಡಲು ತಾಕತ್ತು ಇಲ್ವಾ ಅಥವಾ ಅಮೌಂಟ್ ಇಲ್ವಾ ಬೇಗ ಜನರಿಗೆ ಇದರ ಬಗ್ಗೆ ಉತ್ತರ ಕೊಡಿ ಎಂದು ಎಲ್ಲಾ ಯುವಕರು ಹೋರಾಟಕ್ಕೆ ಇಳಿಯುತ್ತಿದ್ದಾರೆ.

ಮಾರ್ಚ್ ತಿಂಗಳಲ್ಲಿ( ಇದೇ ತಿಂಗಳಿನಲ್ಲಿ).?

ಕರ್ನಾಟಕ ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಹೇಳಿದರು ಇದೇ ಮಾರ್ಚ್ ತಿಂಗಳಲ್ಲಿ 56 ಸಾವಿರಕ್ಕಿಂತ ಅಧಿಕ ಹುದ್ದೆಗಳನ್ನು ನೇಮಕಾತಿ ಮಾಡುತ್ತೇವೆ ಎಂದು ಆದರೆ ಇಲ್ಲಿ ನಾಚಿಕೆ ಪಡುವ ಸಂಗತಿ ಏನೆಂದರೆ ಈಗ ಅರ್ಧ ಮಾರ್ಚ್ ತಿಂಗಳು ಮುಗೀತು ಇನ್ನು ಯಾವುದೇ ನೋಟಿಫಿಕೇಶನ್ ಬಂದಿಲ್ಲ ಇದು ಮಾರ್ಚ್ ಕೊನೆಯ ವಾರ ಈ ಸರ್ಕಾರ ಸುಳ್ಳು ಮೇಲೆ ಸುಳ್ಳು ಭರವಸೆ ನೀಡುತ್ತಿದೆ.

ದಯವಿಟ್ಟು ಎಲ್ಲಾ ಯುವಕರು ನಿಮ್ಮ ಬಲ ಎಂದು ಸರಕಾರಕ್ಕೆ ತೋರಿಸಬೇಕು ನೀವು ಬರೆ ಒಂದು ಜಿಲ್ಲೆ ಬಂದು ಮಾಡಿದರೆ ಸಾಲದು ಇಡೀ ಕರ್ನಾಟಕ ರಾಜ್ಯ ಬಂದ ಮಾಡಬೇಕು ಎಲ್ಲಿವರೆಗೆ ಅಧಿಸೂಚನೆ ಬಿಡುಗಡೆ ಮಾಡೋದೆಲ್ಲೋ ಅಲ್ಲಿಯವರೆಗೆ ಇಡೀ ಕರ್ನಾಟಕ ರಾಜ್ಯ ಬಂದ ಮಾಡಿ.

ನಮ್ಮ ಸಲಹೆ:

ಕರ್ನಾಟಕ ರಾಜ್ಯ( ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರ) ಯಾವುದೇ ಅಧಿಕಾರಕ್ಕೆ ಬಂದರೂ ಸುಳ್ಳ ಭರವಸೆ ಮೇಲೆ ಸುಳ್ಳು ಭರವಸೆ ನೀಡುತ್ತಾರೆ ಇದನ್ನು ನಂಬಿ ನೀವು ಮೋಸ ಹೋಗಬೇಡಿ. ಈಗ ನೀವು ನಿಮಗೆ ಸರ್ಕಾರಿ ಹುದ್ದೆ ಬೇಕೆಂದರೆ ಇಡೀ ಕರ್ನಾಟಕ ರಾಜ್ಯ 1 ತಿಂಗಳಲ್ಲ ಎರಡು ತಿಂಗಳು ಬಂದ ಮಾಡಬೇಕು ಇಡೀ ಕರ್ನಾಟಕ ರಾಜ್ಯದಲ್ಲಿರುವ ಸರಕಾರಿ ಸಚಿವರು ಅಧಿಕಾರಿಗಳಿಗೆ ಮನೆಗಳಿಗೆ ಬೀಗ ಹಾಕಬೇಕು ಆ ರೀತಿಯಲ್ಲಿ ಹೋರಾಟ ಮಾಡಿದರೆ ಮಾತ್ರ ಈ ಸರ್ಕಾರಕ್ಕೆ ಬುದ್ಧಿ ಬರೋದು ಅದುಸೂಚನೆ ಪ್ರಕಟ ಮಾಡುತ್ತಾರೆ? ನಿಮ್ಮ ಗೋಳು ಯಾರೂ ಕೇಳುವುದಿಲ್ಲ ಅರ್ಥ ಮಾಡಿಕೊಳ್ಳಿ.

ವಿದ್ಯಾರ್ಥಿಗಳ ಪರದಾಟ( ಜೀವನದ ಪ್ರಶ್ನೆ).?

ಮನೆಯಲ್ಲಿ ತಂದೆ ತಾಯಿ ಅಕ್ಕ ಅಣ್ಣ ತಮ್ಮ ಇವರೆಲ್ಲರನ್ನ ಬಿಟ್ಟು ಯಾವುದೋ ಒಂದು ಊರಿನಲ್ಲಿ ಹೋಗಿ ತಮ್ಮೆಲ್ಲ ಕೆಲಸ ಮನೆ ಮಠ ಬಿಟ್ಟು ಸರಕಾರಿ ಉದ್ಯೋಗ ಪಡಿಬೇಕು ಅನ್ನೋ ಒಂದೇ ಆಸೆಗೆ ಎಲ್ಲರೂ ಕಷ್ಟಪಟ್ಟು ಓದುತ್ತಿದ್ದೀರಿ ಆದರೆ ನಿಮ್ಮ ಜೀವನ ಸರ್ವನಾಶ ಮಾಡುತ್ತಿದೆ ಈ ಸರಕಾರ ಈ ಸರಕಾರದಲ್ಲೇ ಲಂಚ ಕೋರರು ಲೂಟಿಗಾರರು ಮತ್ತು ಅವರ ಮನೆ ಕುಟುಂಬವವರು ಜಾಸ್ತಿ ಆಗಿದ್ದಾರೆ ಇದೇ ರೀತಿಯಾಗಿ ಮುಂದುವರೆದರೆ ನಿಮ್ಮ ಜೀವನ ಹಾಳಾಗುವುದರಲ್ಲಿ ಪ್ರಶ್ನೆನೇ ಇಲ್ಲ ವಯೋಮಿತಿ ಮೀರಿ ಹೋಗುತ್ತಿದೆ ಇನ್ನು ನೇಮಕಾತಿ ಮಾಡುತ್ತಿಲ್ಲ, ಬೇಗ ಎಲ್ಲಾ ಕರ್ನಾಟಕ ವಿದ್ಯಾರ್ಥಿಗಳು ಚರ್ಚೆ ಮಾಡಿ ಇಡೀ ಕರ್ನಾಟಕ ರಾಜ್ಯವನ್ನೇ ಬಂದು ಮಾಡಿಸಿ ಒಳ್ಳೆಯದು ಆಮೇಲೆ ಇವರು ನೋಟಿಸ್ ಬಿಡುಗಡೆ ಮಾಡುತ್ತಾರೆ ಇಲ್ಲವಾದರೆ ನೀವು ಹೀಗೆ ಓದುತ್ತೀರಿ ಅವರು ಹೀಗೆ ಅವರ ಕೆಲಸ ಮಾಡುತ್ತಾರೆ!

ಇಲ್ಲಿ ಗಮನಿಸಿ: ಇನ್ ಮೇಲೆ ಹೋರಾಟ ಮಾಡಿದರೆ ಅಧಿಸೂಚನೆ ಬಿಡುಗಡೆ ಮಾಡುವವರೆಗೂ ನೀವು ಹೋರಾಟ ನಿಲ್ಲಿಸಬೇಡಿ.

ಎಲ್ಲ ವಿದ್ಯಾರ್ಥಿಗಳಿಗೆ ಕಿವಿಮಾತು:

ನೋಡಿ ನೀವು ಕರ್ನಾಟಕ ರಾಜ್ಯ ಹುದ್ದೆಗಾಗಿ ಕಾಯುತ್ತಾ ಕುಳಿತುಕೊಳ್ಳಬೇಡಿ ಕೇಂದ್ರ ಸರಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಅಪ್ಲಿಕೇಷನ್ ಕರಿಯುತ್ತಿದ್ದಾರೆ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಅಪ್ಲಿಕೇಶನ್ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಿ. ರಾಜ್ಯ ಸರ್ಕಾರ ನೇಮಕಾತಿ ಮಾಡೋದು ಡೌಟು ನೀವು ಮುದುಕು ಆಗುತ್ತೀರಿ ಹೊರತು ನಿಮಗೆ ಸರ್ಕಾರಿ ಹುದ್ದೆಗಳು ಸಿಗೋದು ಡೌಟು ಆದಕಾರಣ ಕೇಂದ್ರ ಸರಕಾರ ಕಡೆ ಗಮನ ಕೊಡಿ,

ನಮ್ಮಿಂದ ಮತ್ತು ಯುವಕರಿಂದ ಸರಕಾರಕ್ಕೆ ಮನವಿ:

ಇನ್ ಮೇಲೆ ಯಾರನ್ನ ಆಯ್ಕೆ ಮಾಡಬೇಕು ಯಾರನ್ನ ಆಯ್ಕೆ ಮಾಡಬಾರದು ಯುವಕರ ಕೈಯಲ್ಲಿ ನಿಮ್ಮ ಭವಿಷ್ಯ ಇದೆ. ಸರಕಾರ ಬೇಗ ಎಲ್ಲಾ ಯುವಕರಿಗೆ ಹೊಸ ನೇಮಕಾತಿ ಅಧಿಸೂಚನೆಗಳು ಬಿಡುಗಡೆ ಮಾಡಿ ಅವರಿಗೆ ಉದ್ಯೋಗಗಳು ಕಲ್ಪಿಸಿಕೊಡಿ ಕೊಟ್ಟ ಮಾತಿನಂತೆ ನಿಮ್ಮ ಮಾತನ್ನ ಉಳಿಸಿಕೊಳ್ಳಿ ಮಾನ್ಯ ಸರ್ಕಾರ ನಮ್ಮಿಂದ ಮತ್ತು ನಮ್ಮ ಯುವಕರಿಂದ ಸರಕಾರ ಕರ್ನಾಟಕ ಮಾನ್ಯ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸರಕಾರಿ ಅಧಿಕಾರಿಗಳಿಗೆ ವಿನಂತಿ,

ಪ್ರಶಾಂತ್ ಮೀಡಿಯಾ ಕೊನೆಯ ಮಾತು:

ಇದಾಗಲೇ ಕರ್ನಾಟಕದಲ್ಲಿ ಸರ್ಕಾರಿ ಆಗುತ್ತಿರುವ ಉದ್ಯೋಗದಲ್ಲಿ ಉದ್ಯೋಗ ಅಕಾಂಕ್ಷಿಗಳಿಗೆ ಆಗುತ್ತಿರುವ ಕಷ್ಟಗಳ ಬಗ್ಗೆ ಚರ್ಚೆ ಮಾಡಿ ಈ ಲೇಖನಿಯಲ್ಲಿ ಮಾಹಿತಿಗಳನ್ನ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಮಾತ್ರ ಬರುತ್ತದೆ,

Leave a Comment