KSP ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ PET-PST ದೈಹಿಕ ಪರೀಕ್ಷೆ ದಿನಾಂಕ ಪ್ರಕಟ

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ( CAR/DAR) ET -PST ದೈಹಿಕ ಪರೀಕ್ಷೆ ದಿನಾಂಕ ಪ್ರಕಟ ಗುಡ್ ನ್ಯೂಸ್ : ಯಾವ ದಿನಾಂಕಕ್ಕೆ ಯಾವ ಘಟಕ ಪರೀಕ್ಷೆ? ಅಧಿಸೂಚನೆಯಲ್ಲಿ ಏನಿದೆ, ಎಲ್ಲೆಲ್ಲಿ ಪರೀಕ್ಷೆ ಇರುತ್ತೆ? ಸಂಪೂರ್ಣ ಮಾಹಿತಿಗೆ ಲೇಖನಿ ಓದಿ!

2026 ರಲ್ಲಿ ಕರೆದಿರುವ ಕರ್ನಾಟಕ ಪೊಲೀಸ್ ಇಲಾಖೆ CAR DAR ಹುದ್ದೆಗಳ ಲಿಖಿತ ಪರೀಕ್ಷೆ ಈಗಾಗಲೇ ಮುಗಿದಿದೆ ಈಗ ದೈಹಿಕ ಪರೀಕ್ಷೆಯ ದಿನಾಂಕ ಮಾಡಿದ್ದಾರೆ, ದಿನಾಂಕ 09 ಅಕ್ಟೋಂಬರ್ 2026 ರಂದು ಇಮೇಲ್ ಸಂದೇಶ ಕಳಿಸಿಕೊಟ್ಟಿದ್ದಾರೆ.

CAR DAR ಯಾವ ದಿನಾಂಕಕ್ಕೆ ET – PST ಪರೀಕ್ಷೆ ಇರುತ್ತೆ?

ಅಧಿಕೃತವಾಗಿ ಈಗ 2026-27 ಸಾಲಿನ CAR DAR ಹುದ್ದೆಗಳ ನೇಮಕಾತಿಯ ದಕ್ಷಿಣ ವಲಯದಲ್ಲಿ ಬರುವ ಜಿಲ್ಲೆಗಳ ಸಮೇತ ದಿನಾಂಕ ದಿನಾಂಕ ಪ್ರಕಟ ಮಾಡಿದ್ದಾರೆ.

ದಿನಾಂಕ 27 ಅಕ್ಟೋಬರ್ 2026 ರಿಂದ 31 -10-2026 ವರೆಗೆ PST/PET ನಡೆಸಲಾಗುತ್ತದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಯಾವ ಘಟಕಗಳ( ಜಿಲ್ಲೆ ) ಪರೀಕ್ಷೆ ಇರಲಿದೆ ದಕ್ಷಿಣ ವಲಯ:

ಮೈಸೂರು ನಗರ ಹಾಗೂ ಮೈಸೂರು ಜಿಲ್ಲೆ ಮತ್ತು ಮಂಡ್ಯ ಕೊಡಗು,LARP ಮೌಂಟ್ಡ್ ಕಂಪನಿ ಮೈಸೂರು ಈ ಘಟಕಗಳಲ್ಲಿ ಪರೀಕ್ಷೆ ನಡೆಯಲಿದೆ.

CAR DAR PET-PST ಪರೀಕ್ಷೆಯ ಅಧಿಕೃತ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ದಕ್ಷಿಣ ವಲಯದಲ್ಲಿ ಎಷ್ಟು ಅಭ್ಯರ್ಥಿಗಳಿಗೆ ಅವಕಾಶ?

ಸಂದೇಶದಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಒಟ್ಟು ಎಲ್ಲಾ ಘಟಕಗಳ ಸೇರ್ಪಡೆ ಮಾಡಿ 960 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುತ್ತಾರೆ ಅದರಲ್ಲಿ ಜಿಲ್ಲೆಯ ಪ್ರಕಾರ ಅಭ್ಯರ್ಥಿಗಳನ್ನ ಹಂಚಿಕೆ ಮಾಡಿದ್ದಾರೆ ಅದರ ಮಾಹಿತಿ ಮೇಲೆ ಕೊಟ್ಟಿರುವ ಸಂದೇಶ ಡೌನ್ಲೋಡ್ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿ ಓದಿ

ಪ್ರಶಾಂತ್ ಮೀಡಿಯಾ ಸಲಹೆ :

ನೋಡಿ ಈ ದಿನಾಂಕ ಮತ್ತೆ ಬದಲಾವಣೆ ಆಗಬಹುದು ಸಂದೇಶ ಮೂಲಕ ಮಾನ್ಯ ಐಜಿಪಿ ದಕ್ಷಿಣ ವಲಯ ಮೈಸೂರು ಇವರಿಗೆ ಇಮೇಲ್ ಮೂಲಕ ಕಳಿಸಿಕೊಟ್ಟಿದ್ದಾರೆ ಆದ ಕಾರಣ ನೀವು ರನ್ನಿಂಗ್ ದೈಹಿಕ ಪರೀಕ್ಷೆಗೆ ಸಂಬಂಧಪಟ್ಟಂತೆ ಏನೆಲ್ಲ ತಯಾರಿ ಬೇಕು ಅದನ್ನೆಲ್ಲ ಪೂರ್ಣಗೊಳಿಸಿ ದಿನಾಂಕದಲ್ಲಿ ಬದಲಾವಣೆ ಆದರೆ ಮತ್ತೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.