218 ಹುದ್ದೆಗಳು : KEA ಕಿರಿಯ ಇಂಜಿನಿಯರ್ ( JE) ನೇಮಕಾತಿ 2026 – ಒಮ್ಮೆ ಸಂಪೂರ್ಣ ಮಾಹಿತಿ ಓದಿ

218 ಹುದ್ದೆಗಳು : KEA JE – 7 ಇಲಾಖೆಯಲ್ಲಿ ನೇಮಕಾತಿ 2026 : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಅಂತರ್ಜಲ ನಿರ್ದೇಶನಾಲಯ, ಗೃಹ ಮಂಡಳಿ ಹಾಗೂ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಇತರೆ ವಿಭಾಗ ಸಂಸ್ಥೆಗಳಲ್ಲಿ ಅಧಿಸೂಚನೆ ಪ್ರಕಟ : Online ಮೂಲಕ ಅರ್ಜಿ ಸಲ್ಲಿಸಿ!

ನೀವು ಡಿಪ್ಲೋಮಾ ಪಾಸ್ ಆಗಿದ್ದೀರಾ? ಸರಕಾರಿ ಹುದ್ದೆ ಕರ್ನಾಟಕದಲ್ಲಿ ಕಾಯುತ್ತಿದ್ದೀರಾ? ಮನೆಯಲ್ಲಿ ಬೈಯುತ್ತಿದ್ದಾರೆ? ನಿಮ್ಮದು 18 ವರ್ಷ ಆಗಿದೆಯಾ? ಹಾಗಾದ್ರೆ ಇದೀಗ ಕರ್ನಾಟಕ ರಾಜ್ಯದಲ್ಲಿ 31-10-2026 ರಂದು ನೋಟಿಫಿಕೇಶನ್ ಪ್ರಕಟ ಮಾಡಿದೆ, ಕಿರಿಯ ಇಂಜಿನಿಯರ್(JE) ಮತ್ತು ನಗರ ಯೋಜಕರು ಹಾಗೂ ಪ್ರಾರೂಪಕರು ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

7 ಇಲಾಖೆಯ ನೇಮಕಾತಿ ವಿವರ :

KEA ನೋಟಿಫಿಕೇಶನ್ ಪ್ರಕಾರ ಪ್ರಮುಖ ದಿನಾಂಕಗಳ ವಿವರ ( Notification Important Dates Details):
  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ & ಅಧಿಕೃತ ಅಧಿಸೂಚನೆ ಬಿಡುಗಡೆ ದಿನಾಂಕ : 31-10-2026
  •  ಕೊನೆಯ ದಿನಾಂಕ : 26 ನವೆಂಬರ್ 2026
  •  Application Fees ಪಾವತಿ, ಕೊನೆಯ ದಿನಾಂಕ : 27 -11-2026
  •  ಕನ್ನಡ ಭಾಷೆ ಪರೀಕ್ಷೆ : 08-1-2027 ರಂದು ಮಧ್ಯಾಹ್ನ ಪರೀಕ್ಷೆ ಇರುತ್ತದೆ.
  •  ಪ್ರಮುಖ ಪತ್ರಿಕೆ -1 & 2 ಜನವರಿ ತಿಂಗಳಲ್ಲಿ ನಡೆಸಲಾಗುವುದು.
ಸಂಸ್ಥೆ ವಿವರ & ಹುದ್ದೆಗಳ ಪ್ರಮುಖ ಮಾಹಿತಿ( Posts & Place – Department Details):

KEA ಸಂಸ್ಥೆಯಲ್ಲಿ 7 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಒಟ್ಟು 218 ಹುದ್ದೆಗಳು ಅಖಿಲ ಕರ್ನಾಟಕದಲ್ಲಿ ಕೆಲಸ ಇರುತ್ತದೆ.

ಹುದ್ದೆಗಳ ಮಾಹಿತಿ :
  1.  ಕಿರಿಯ ಇಂಜಿನಿಯರ್ ( JE)
  2.  ಪ್ರರೂಪಕರು
  3.  ಸಹಾಯಕ ನಗರ ಯೋಜಕರು
  4.  JE ಹುದ್ದೆಯಲ್ಲಿ ವಿವಿಧ ವಿಭಾಗ ವಿಷಯಗಳಲ್ಲಿ ನೇಮಕಾತ
ಶೈಕ್ಷಣಿಕ ಮಾಹಿತಿ & ವೈಮಿತಿ ಬಗ್ಗೆ ವಿವರ ( Qualification & Age limit Details):

31 ಅಕ್ಟೋಂಬರ್ ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವರ್ಗಕ್ಕೆ ಸಂಬಂಧಪಟ್ಟಂತೆ , 40 ,43,45 ವರ್ಷ ಒಳಗಿರಬೇಕು. ವಿದ್ಯಾರ್ಹತೆ ಡಿಪ್ಲೋಮಾ ಮುಗಿಸಬೇಕು ಹುದ್ದೆಗಳ ತಕ್ಕಂತೆ ವಿಷಯಗಳಲ್ಲಿ ಪಾಸ್ ಆಗಿರಬೇಕು ನೋಟಿಫಿಕೇಶನ್ ಓದಿ.

ಆಯ್ಕೆ ವಿಧಾನ & ಸಂಬಳದ ಬಗ್ಗೆ ಮಾಹಿತಿ ಹಾಗೂ ಶುಲ್ಕ :
  1.  ಇಲಾಖೆಯು ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಆಫ್ಲೈನ್ ನಲ್ಲಿ OMR ಮೂಲಕ ಪರೀಕ್ಷೆ ಇರುತ್ತದೆ.
  2.  ಪ್ರತಿ ತಿಂಗಳು ಸಂಬಳ : 54175/- ರಿಂದ 99400/- ಇರುತ್ತದೆ.
  3.  ಶುಲ್ಕ ಇರುತ್ತದೆ ವರ್ಗಕ್ಕೆ ತಕ್ಕಂತೆ.
ಪ್ರಶಾಂತ್ ಮೀಡಿಯಾ ಸಲಹೆ :

ಈ ಹುದ್ದೆಗಳಿಗೆ ಈ ನೇಮಕಾತಿಗೆ ಡಿಪ್ಲೋಮಾ ಹೊರತುಪಡಿಸಿ ಬೇರೆ ಯಾವುದೇ ಶೈಕ್ಷಣಿಕ ಅರ್ಹತೆ ಇದ್ದವರು ಅರ್ಜಿ ಹಾಕಲು ಆಗೋದಿಲ್ಲ ಉದಾಹರಣೆಗೆ 10th,12th Any Degree ಸ್ನಾತಕೋತ್ತರ ಪದವಿ, ಹೀಗೆ ಇದ್ದವರಿಗೆ ಅವಕಾಶ ಇಲ್ಲ ಡಿಪ್ಲೋಮಾ ಮುಗಿಸಿದವರು ಯಾವುದೇ ವಿಭಾಗದಲ್ಲಿ ಅರ್ಜಿ ಹಾಕಲು ಅವಕಾಶ ಮಾತ್ರ ಕೊಟ್ಟಿದ್ದಾರೆ.

ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹೇಗೆ ಹಾಕೋದು ( how to Apply):

ಸಾಮಾನ್ಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್ಲೈನ್ ಅವಕಾಶ ನೀಡಿದೆ.

• KEA ಮುಖ್ಯ ಪುಟದಲ್ಲಿ ಹೋಗಿ ರಿಜಿಸ್ಟರ್ ಮತ್ತು ಲಾಗಿನ್ ಹಾಗೂ ದಾಖಲೆಗಳು ಅಪ್ಲೋಡ್ ಹಾಗೂ ಎಲ್ಲಾ ಇತರೆ ವೈಯಕ್ತಿಕ ಮಾಹಿತಿಗಳನ್ನು ತುಂಬಿ ಸರಿಯಾಗಿ ಅರ್ಜಿಗಳು ಭರ್ತಿ ಮಾಡಿ ಶುಲ್ಕ ಆನ್ಲೈನ್ ನಲ್ಲೆ ಪಾವತಿ ಮಾಡಬೇಕು . ಮುಂದೆ ನಿಮಗೆ ಬೇಕಾಗುತ್ತದೆ ಅರ್ಜೆ ಹಾಕಿದ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ನಿಮ್ಮ ಬಳಿ.