1600 ಹುದ್ದೆಗಳು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಅರ್ಜಿ ಪ್ರಾರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ

KSP ನೇಮಕಾತಿ 2026 CAR DAR ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2026 ಅಧಿಕೃತ ಅಧಿಸೂಚನೆ ಪ್ರಕಟ ಬಂತು ಭರ್ಜರಿ ಗುಡ್ ನ್ಯೂಸ್ ಸಂಪೂರ್ಣ ಮಾಹಿತಿ ಇಲ್ಲಿದೆ.

 

 

ಕರ್ನಾಟಕದಲ್ಲಿ KEA ಇಲಾಖೆಯಿಂದ ಅಧಿಸೂಚನೆ ಪ್ರಕಟ ಒಟ್ಟು 1600 ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಆನ್ಲೈನ್ ನಲ್ಲಿ 22 -06-2026 ರಿಂದ 22-7-2026 ವರೆಗೆ ಅವಕಾಶ ಇದೆ ದ್ವಿತೀಯ ಪಿಯುಸಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅದುಸೂಚನೆ ಬಿಡುಗಡೆ ಮಾಡಿದ್ದು 19-6-2026 ರಂದು ಪ್ರಕಟ ಮಾಡಿದೆ ಕರ್ನಾಟಕ ಪೊಲೀಸ್ ಇಲಾಖೆ. ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ WhatsApp ಗ್ರೂಪಿಗೆ ಭೇಟಿ ಕೊಡಿ.

ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.? ( KSP CAR DAR Recruitment 2026).?

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ 2026 ಆದರೆ ಅಧಿಸೂಚನೆ ಬಿಡುಗಡೆ ಮಾಡಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಂಸ್ಥೆ- ಒಟ್ಟು 1600 ಹುದ್ದೆಗಳು KK 179 + RPC 1421 ನೇಮಕಾತಿ – ಅಖಿಲ ಕರ್ನಾಟಕದಲ್ಲಿ ಕೆಲಸ ಎಲ್ಲ ಜಿಲ್ಲೆಗಳಲ್ಲಿ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?( Qualification & Post Details.?

  •  ಪ್ರಸ್ತುತ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್(CAR/DAR) ಹುದ್ದೆಗೆ ಅರ್ಜಿ ಕರೆಯಲಾಗಿದೆ.
  •  ಇಲ್ಲಿ ದ್ವಿತೀಯ ಪಿಯುಸಿ ಹಾಗೂ ತತ್ಸಮಾನ ಪಾಸ್ ಆಗಿರಬೇಕು/ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ.

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ವಯೋಮಿತಿ ಎಷ್ಟಿರಬೇಕು.?( Age limit & Salary.?

  •  ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಗಳ ಪ್ರಕಾರ ಪ್ರತಿ ತಿಂಗಳು 37500/- ರಿಂದ 76100/- ಸಂಬಳ.
  •  ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಇರಬೇಕು ನಿಯಮಗಳ ಪ್ರಕಾರ ವೈಯಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ. 3 ವರ್ಷದಿಂದ 5 ವರ್ಷದವರೆಗೆ.

ಅರ್ಜಿದಾರರಿಗೆ ನಮ್ಮ ಸಲಹೆ:

ಅರ್ಜಿ ಸಲ್ಲಿಸುವ ಮುಂಚಿತವಾಗಿ ಅಧಿಸೂಚನೆ ನೋಡಿ ನಿಮ್ಮ ವರ್ಗಕ್ಕೆ ಆಧಾರದ ಮೇಲೆ ಯಾವ ಜಿಲ್ಲೆಯಲ್ಲಿ ನಿಮ್ಮ ವರ್ಗದಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಇದೆ ಅಲ್ಲಿ ಅರ್ಜಿ ಸಲ್ಲಿಸಿದರೆ ಒಳ್ಳೆಯದು ಮತ್ತು ಬೆರೆಯವರ ಮಾತು ಕೇಳಿ ಅರ್ಜಿ ಹಾಕಬೇಡಿ 2023/24 ಸಂಬಂಧಪಟ್ಟಂತೆ ಹೊಂದಾಣಿಕೆ ಮಾಡಬೇಡಿ ಈಗ ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆ ನಡೆಸಲಾಗುತ್ತಿದೆ ಆದಕಾರಣ ನಿಮ್ಮ ವರ್ಗದಲ್ಲಿ ಎಲ್ಲಿ ಜಾಸ್ತಿ ಹುದ್ದೆಗಳು ಇದೆ ಅಲ್ಲಿ ಅಪ್ಲಿಕೇಶನ್ ಹಾಕಿ ಒಳ್ಳೆಯದು.

ಇದನ್ನು ಓದಿ: ಕರ್ನಾಟಕ ತುಮಕೂರು ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ

ಆಯ್ಕೆ ವಿಧಾನ ಹೇಗಿರುತ್ತದೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?

ಅರ್ಜಿ ಶುಲ್ಕ- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಮಾಜಿ ಸೈನಿಕರಿಗೆ ಹಾಗೂ ಪ್ರವರಗ ಅಭ್ಯರ್ಥಿಗಳಿಗೆ- ₹500/- ಇರುತ್ತದೆ ಮತ್ತು ಸಾಮಾನ್ಯ ಅಭ್ಯರ್ಥಿಗಳು ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು 2A,2B,3A,3B ಅಭ್ಯರ್ಥಿಗಳಿಗೆ: ₹750/- ಶುಲ್ಕ.

ಆಯ್ಕೆ ವಿಧಾನ- 1)ಲಿಖಿತ ಪರೀಕ್ಷೆ ಮತ್ತು ಕಡ್ಡಾಯ ಕನ್ನಡ ಪರೀಕ್ಷೆ 2) ದೈಹಿಕ ಪರೀಕ್ಷೆ 3) ವೈದ್ಯಕೀಯ ಪರೀಕ್ಷೆ 4) ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ.

ಒಂದು ಹುದ್ದೆಗೆ ಎಷ್ಟು ಜನ ಅರ್ಜಿ ಹಾಕಬೇಕು.?

ಅದುಸೂಚನೆ ಪ್ರಕಾರ ಒಂದು ಹುದ್ದೆಗೆ ಒಬ್ಬ ವ್ಯಕ್ತಿ ಮಾತ್ರ ಅರ್ಜಿ ಸಲ್ಲಿಸಬೇಕು ಮತ್ತು ಒಂದು ಜಿಲ್ಲೆಗೆ ಒಬ್ಬ ವ್ಯಕ್ತಿ ಅಧಿಸೂಚನೆ ಪ್ರಕಾರ ಹೆಚ್ಚು ಜಿಲ್ಲೆಗಳು ಕೊಟ್ಟಿದ್ದಾರೆ ಹೆಚ್ಚು ಜಿಲ್ಲೆಗೆ ಅಪ್ಲಿಕೇಶನ್ ಹಾಕಬಹುದು ಆದರೆ ನೇಮಗಳ ಪ್ರಕಾರ ಒಂದು ಹುದ್ದೆಗೆ ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಅರ್ಜಿ ಹಾಕಬೇಕು.

ಇದನ್ನ ಓದಿ: ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು ನಿಗಮದಲ್ಲಿ ಪರೀಕ್ಷೆ ಇಲ್ಲದೆ ನೇಮಕಾತಿ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಇಲ್ಲಿದೆ.?

  1. RPC Official Notification Pdf ಇಲ್ಲಿ ಕ್ಲಿಕ್ ಮಾಡಿ
  2. Kk Notification Pdf Click Here
  3. Apply link ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ವಿಧಾನ.?

ಈಗಾಗಲೇ ಅಧಿಸೂಚನೆ ಪ್ರಕಟ ಮಾಡಿದ ದಿನಾಂಕ 19-6-2026 ರಂದು ಪ್ರಕಟ ಮತ್ತು ಆನ್ಲೈನಲ್ಲಿ ಅರ್ಜಿ ಪ್ರಾರಂಭ 22-6-2026 ರಿಂದ 22-7-2026 ವರೆಗೆ ಅವಕಾಶ ನೀಡಲಾಗಿದೆ.

ಲಿಖಿತ ಪರೀಕ್ಷೆ ದಿನಾಂಕ:

06-09-2026 ರಂದು ನಡೆಸಲಾಗುತ್ತದೆ ಅದುಸೂಚನೆ ಪ್ರಕಾರ ದಿನಾಂಕ

ಆನ್ಲೈನ್ ನಲ್ಲಿ ಅರ್ಜಿ- ಆನ್ಲೈನ್ ನಲ್ಲಿ ಮೊದಲಿಗೆ ಅಧಿಕೃತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ಮತ್ತು ಎಲ್ಲಾ ಮಾಹಿತಿಗಳು ಸರಿಯಾಗಿ ನೇಮಗಳ ಪ್ರಕಾರ ಸಲ್ಲಿಸಿ ಹಾಗೂ ಲೋಗಿನ್ ಮಾಡಿಕೊಂಡು ಎಲ್ಲಾ ವೈಯಕ್ತಿಕ ಮಾಹಿತಿಗಳು ಹೆಸರು ವಿಳಾಸ ದಾಖಲೆಗಳು ಸಲ್ಲಿಸಿ ಕೊನೆಯಲ್ಲಿ ಅಪ್ಲಿಕೇಶನ್ ಶುಲ್ಕ ಪಾವತಿ ಮಾಡ ಮತ್ತು ಅಪ್ಲಿಕೇಶನ್ ದಾಖಲೆಗಳು ಆಫ್ಲೋಡ್ ಮಾಡಿ ನಂತರ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು:

ಮೇಲೆ ತಿಳಿಸಿಕೊಟ್ಟಿರುವ ಎಲ್ಲ ಮಾಹಿತಿ ಅಧಿಕೃತ ಅಧಿಸೂಚನೆ ಪ್ರಕಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೋಟಿಫಿಕೇಶನ್ ಬಗ್ಗೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ.