ಕ್ರೀಡಾಕೂಟ Group C ಹುದ್ದೆಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2026 : ಅರ್ಹತೆ, ದಾಖಲೆ ಮತ್ತು ಅರ್ಜಿ ಹೇಗೆ ಹಾಕೋದು? ಸಂಪೂರ್ಣ ಮಾಹಿತಿ

ಭಾರತೀಯ ರೈಲ್ವೆ ಕೋಶದಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ ನೋಟಿಫಿಕೇಶನ್ ಪ್ರಕಟಗೊಂಡಿದೆ, ಸಂಸ್ಕೃತಿಕ ಕ್ರೀಡಾಕೂಟದ ವೃಂದದಲ್ಲಿ ಅರ್ಜಿ ಕರೆಯಲಾಗಿದೆ,SSLC, ಡಿಪ್ಲೋಮಾ ಹಾಗೂ ಐಟಿಐ ಮತ್ತು ದ್ವಿತೀಯ ಪಿಯುಸಿ ಮುಗುಸಿದವರು ಅರ್ಜಿ ಹಾಕಲು ಅನುಮತಿ! – RRC Railway Notification out.! ಹೇಗೆ ಅರ್ಜಿ ಹಾಕೋದು? ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಗೆ ಲೇಖನಿ ಓದಿ.

ರೈಲ್ವೆ ನೇಮಕಾತಿ ವಿವರ :

ಸಂಸ್ಥೆ : ಪೂರ್ವ ರೈಲ್ವೆ ಕೋಶ (RRC )
ಸ್ಥಳ : ಭಾರತದಲ್ಲಿ
ಹುದ್ದೆಗಳ ವಿವರ : ಗ್ರೂಪ್ ಸಿ ವೃಂದದ ಹುದ್ದೆ
ಕೊನೆಯ ದಿನಾಂಕ : 08-11-2026
ಒಟ್ಟು ಹುದ್ದೆ : 02

ಈ ಮೇಲೆ ಕೊಟ್ಟಿರುವ ಕೆಲವು ಪ್ರಮುಖ ಮಾಹಿತಿಗಳನ್ನ ನಿಮ್ಮ ಮುಂದೆ ಹಂಚಿಕೊಂಡಿದ್ದೇವೆ ಉಳಿದ ಮುಖ್ಯವಾಗಿರುವಂತ ಮಾಹಿತಿಗಳು ಕೆಳಗಡೆ ಹಂತ ಹಂತವಾಗಿ ಕೊಡಲಾಗಿದೆ ನೋಡಿ.

RRC ರೈಲ್ವೆ ನೋಟಿಫಿಕೇಶನ್ ಪ್ರಕಾರ ವಯೋಮಿತಿ ಎಷ್ಟು?

ಕನಿಷ್ಠ ಅರ್ಜಿದಾರರಿಗೆ 18 ವರ್ಷದಿಂದ ಗರಿಷ್ಠ 30 ವರ್ಷದ ಒಳಗಡೆ ಇರಬೇಕು ಮಾನದಂಡಗಳ ಪ್ರಕಾರ ಕೇಂದ್ರ ರೈಲ್ವೆ ಕೋಶ ವೈಮಿತಿಯಲ್ಲಿ ಸಡಲಿಕ್ಕೆ ನೀಡಿದ್ದಾರೆ.

ಅರ್ಜಿ ಶುಲ್ಕ ಎಷ್ಟಿದೆ

• ಅಂಗವಿಕಲರು,SC, ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಹಾಗೂ ಮಾಜಿ ಸೈನಿಕರಿಗೆ : 250/- ( ಇಲ್ಲಿ ಗಮನಿಸಿ ಲಿಖಿತ ಪರೀಕ್ಷೆಗೆ ನೀವು ಹಾಜರಾದರೆ ನಿಮ್ಮ ಅಮೌಂಟ್ ಹಿಂತಿರುಗಿಸುತ್ತಾರೆ)
• OBC,UR ಮತ್ತು ವರ್ಗದವರಿಗೆ ಪುರುಷರಿಗೆ : 500/- ( ಲಿಖಿತ ಪರೀಕ್ಷೆ ಬರೆಯಲು ಹಾಜರಾದರೆ 400 ಅಮೌಂಟು ನಿಮಗೆ ವಾಪಸ್ ಕಳಿಸುತ್ತಾರೆ)

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ

ರೈಲ್ವೆ ಇಲಾಖೆ ನಿಯಮಗಳ ಪ್ರಕಾರ ಕೇಂದ್ರ ಸರಕಾರ 7ನೇ ಹಂತದ ಪ್ರಕಾರ ಇಲ್ಲಿ ಪ್ರತಿ ತಿಂಗಳು ಗೌರವ ಧನ ಸ್ಟೀಫಂಡ್ ನೀಡಲಾಗುತ್ತದೆ.

ಅರ್ಜಿ ಪ್ರಮುಖ ದಿನಾಂಕಗಳು :

• ಅಧಿಕೃತ ಅಧಿಸೂಚನೆ ಪ್ರಕಟ ದಿನಾಂಕ : 29-09-2026
• ಅರ್ಜಿ ಆನ್ಲೈನಲ್ಲಿ ಪ್ರಾರಂಭ : 09-10-2026
• ಕೊನೆಯ ದಿನಾಂಕ 08-11-2026
• ಲಿಖಿತ ಪರೀಕ್ಷೆ ಇರುವ ದಿನಾಂಕ : 2026 ಡಿಸೆಂಬರ್ ನಲ್ಲಿ

ಇಲ್ಲಿ ಗಮನಿಸಿ : ಅರ್ಜಿಯನ್ನು ಪ್ರಾರಂಭವಾಗಿಲ್ಲ ಅಕ್ಟೋಬರ್ ತಿಂಗಳಲ್ಲಿ ಅರ್ಜಿಗಳು ಪ್ರಾರಂಭವಾಗುತ್ತದೆ ಅರ್ಜಿ ಪ್ರಾರಂಭ ಆದ ಮೇಲೆ ಅರ್ಜಿಗಳು ಹಾಕಿ.

ಆಯ್ಕೆ ವಿಧಾನ

1. ಲಿಖಿತ ಪರೀಕ್ಷೆ
2. ಮೌಲ್ಯಮಾಪನದ ಪರೀಕ್ಷೆಗಳು
3. ವೈದ್ಯಕೀಯ ಪರೀಕ್ಷೆ

ಶೈಕ್ಷಣಿಕ ಅರ್ಹತೆ ಏನಾಗಿರಬೇಕು?

ಗ್ರೂಪ್ ಸಿ ವೃಂದದ ಹುದ್ದೆಗಳಿಗೆ – ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th,12th, ಪಾಸಾಗಿರಬೇಕು ಜೊತೆಗೆ ಅಪ್ರೆಂಟಿಸ್ ಪ್ರಮಾಣ ಪತ್ರ, ಡಿಪ್ಲೋಮಾ ಪ್ರಮಾಣ ಪತ್ರ ಪದವಿ ಪ್ರಮಾಣ ಪತ್ರಗಳು ಇರಬೇಕು ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ.

ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು?

ನೋಡಿ ಅರ್ಜಿ ಪ್ರಾರಂಭ ಆದಮೇಲೆ ಅಂದರೆ ಅಕ್ಟೋಬರ್ 09 ರಿಂದ RRC ರೈಲ್ವೆ ಅಧಿಕೃತ ಅಂತರಜಾಲದಲ್ಲಿ ಭೇಟಿಕೊಟ್ಟು ಅರ್ಜಿಗಳು ಹಾಕಿ ಅರ್ಜಿ ಹಾಕುವ ವಿಧಾನ ನೋಟಿಫಿಕೇಶನ್ ದಲ್ಲಿ ಇದೆ ಒಮ್ಮೆ ಪರಿಶೀಲಿಸಿ.