10ನೇ ಮತ್ತು ಪದವಿ ಮುಗಿಸಿದವರಿಗೆ ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಅರ್ಜಿ ಆಹ್ವಾನ! ಇವತ್ತೇ ಅರ್ಜಿ ಸಲ್ಲಿಸಿ

10ನೇ ತರಗತಿ ಮತ್ತು ಪದವಿ ಮುಗಿಸಿದವರಿಗೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ 486 ಹುದ್ದೆಗಳಿಗೆ ಅರ್ಜಿ ಆಹ್ವಾನ! ಅಗ್ನಿಶಾಮಕ ಮತ್ತು ಅಗ್ನಿಶಾಮಕ ಠಾಣಾಧಿಕಾರಿ ಹೊಸ ಅಧಿಸೂಚನೆ ಪ್ರಕಟ! ಕೊನೆಯ ದಿನಾಂಕ 22 ಡಿಸೆಂಬರ್ 2026 ವರೆಗೆ ಅವಕಾಶ, ಆಸಕ್ತಿ ಇದ್ದವರು ಇವತ್ತೇ ಅರ್ಜಿ ಸಲ್ಲಿಸಿ!

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೀಗ ಪುರುಷರಿಗೆ ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆನ್ಲೈನ್ ಮೂಲಕ 23/11/2026 ರಿಂದ 22/12/2026 ವರೆಗೆ ಅವಕಾಶ ನೀಡಲಾಗಿದೆ. ಅರ್ಹತೆಗಳೇನು? ದಾಖಲೆಗಳ ವಿವರ? ವಯಮಿತಿ ದೈಹಿಕ ಪರೀಕ್ಷೆ ಹೇಗೆ? ಸಂಪೂರ್ಣ ಮಾಹಿತಿ ಲೇಖಣಿ ಪೂರ್ತಿ ಓದಿ.

KSFES ನೇಮಕಾತಿ ವಿವರ :

KEA ಅಧಿಸೂಚನೆ ಮಾಡಿದೆ ಇದು ಕರ್ನಾಟಕ ಸರ್ಕಾರಿ ಖಾಯಂ ಹುದ್ದೆಗಳಾಗಿದ್ದು ಮತ್ತು ಪಿಂಚಣಿ ಸೌಲಭ್ಯ, ಸರ್ಕಾರಿ ಭತ್ತೆಗಳು, ಇತರೆ ಸೇವೆಗಳು ಲಭ್ಯವಿರುತ್ತದೆ ಇದು ಸರ್ಕಾರಿ ನೌಕರಿ ಇಲ್ಲಿ ಪುರುಷರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಆಸಕ್ತಿ ಹೊಂದಿದವರು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ.

ಅಧಿಸೂಚನೆ ಮತ್ತು ಹುದ್ದೆಯ ವಿವರ( Notification Post Details):

ಕರ್ನಾಟಕ KEA ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ, ಅಗ್ನಿಶಾಮಕ ಮತ್ತು ಅಗ್ನಿಶಾಮಕ ಠಾಣಾಧಿಕಾರಿ ಒಟ್ಟು 486 ಹುದ್ದೆಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಉದ್ಯೋಗ ಅಖಿಲ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಇರುತ್ತದೆ.

ವೃಂದಗಳ ಪ್ರಕಾರ ವಿವರ:

ಉಳಿಕೆ ಮೂಲ ವೃಂದ ( RPC ) ದಲ್ಲಿ

  •  ಅಗ್ನಿಶಾಮಕ – 460
  •  ಅಗ್ನಿಶಾಮಕ ಠಾಣಾಧಿಕಾರಿ – 16

ಕಲ್ಯಾಣ ಕರ್ನಾಟಕ ವೃಂದ ( KK)

  •  ಅಗ್ನಿಶಾಮಕ ( Fire fighter) – 10

ಇಲ್ಲಿ ಗಮನಿಸಿ : ಇಲಾಖೆಯಿಂದ ಒಟ್ಟು ಮೂರು ಅಧಿಸೂಚನೆಗಳು ಪ್ರಕಟ ಮಾಡಲಾಗಿದೆ ಮೇಲೆ ಕೊಟ್ಟಿರುವ ಹುದ್ದೆ ನಾವು ಅಧಿಕೃತ ನೋಟಿಫಿಕೇಶನ್ ಪ್ರಕಾರ ಮಾಹಿತಿಗಳು ಕೊಟ್ಟಿದ್ದೇವೆ ಒಟ್ಟು 486 ಹುದ್ದೆಗಳು ಖಾಲಿ ಇದೆ.

🔻: ಇದನ್ನ ಓದಿ : ಕೃಷಿ ಇಲಾಖೆ/ ರೇಷ್ಮೆ ಇಲಾಖೆಯಲ್ಲಿ ಹುದ್ದೆಗಳು ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

KSFES ನೇಮಕಾತಿ ಪ್ರಕಾರ ಶೈಕ್ಷಣಿಕ ಅರ್ಹತೆ ( Qualification Details):

ಅಗ್ನಿಶಾಮಕ – ಅರ್ಜಿ ಹಾಕುವ ಅಭ್ಯರ್ಥಿಗಳು ಸರ್ಕಾರಿ ಅಥವಾ ಸಂಸ್ಥೆಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ ಪೂರ್ಣಗೊಳಿಸಬೇಕು ಅಥವಾ ತತ್ಸಮಾನ.

ಅಗ್ನಿಶಾಮಕ ಠಾಣಾಧಿಕಾರಿ – ರಸಾಯನಶಾಸ್ತ್ರ ವಿಷಯದೊಂದಿಗೆ ವಿಜ್ಞಾನ ಪದವಿ ಪೂರ್ಣಗೊಳಿಸಬೇಕು.

ವಯಮಿತಿ : ( KSFES Notification)

  •  ಕನಿಷ್ಠ 18 ವರ್ಷ ಮತ್ತು ಠಾಣಾಧಿಕಾರಿ ಹುದ್ದೆಗೆ ಕನಿಷ್ಠ 21 ವರ್ಷ
  •  ಗರಿಷ್ಟ – 31 ವರ್ಷ ಹಾಗೂ 33 ವರ್ಷದವರೆಗೆ ಅವಕಾಶ

2026 ಮತ್ತು 27ನೇ ಸಾಲಿನ ಪ್ರಕಾರ ವಯೋಮಿತಿಯಲ್ಲಿ 5 ವರ್ಷ ಸಡಲಿಕೆ ಅನ್ವಯಿಸುತ್ತದೆ.

ಆಯ್ಕೆ ವಿಧಾನ :

• KEA ನಡೆಸುವ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮತ್ತು ಮೆರಿಟ್ ಮೇಲೆ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ.

• ಇಲ್ಲಿ ಗಮನಿಸಿ : ಅಗ್ನಿಶಾಮಕ ಹುದ್ದೆಗೆ ಲಿಖಿತ ಪರೀಕ್ಷೆ ಇಲ್ಲ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕಗಳು:

ಅಗ್ನಿಶಾಮಕ RPC ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅಗ್ನಿಶಾಮಕ RPC ಠಾಣಾಧಿಕಾರಿ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಒತ್ತಿ

ಕಲ್ಯಾಣ ಕರ್ನಾಟಕ ಅಗ್ನಿಶಾಮಕ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ವೇತನ ವಿವರ ( Salary Details):

  •  ಅಗ್ನಿಶಾಮಕ ಹುದ್ದೆಗೆ ಪ್ರತಿ ತಿಂಗಳು ₹37500/- ರಿಂದ 76100/-
  •  ಠಾಣಾಧಿಕಾರಿ ಹುದ್ದೆಗೆ : ₹54175/- ರಿಂದ 99400/-

🎯 :WhatsApp Group : ದಿನ ನಿತ್ಯವಾಗಿ ಉದ್ಯೋಗದ ಬಗ್ಗೆ ಮಾಹಿತಿ ಮತ್ತು ಇತರೆ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ WhatsApp ಗ್ರೂಪಿಗೆ ಭೇಟಿ ಕೊಡಿ.

ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ವಿವರ :

ಸ್ನೇಹಿತರೆ ಮೇಲ್ಗಡೆ ನೋಟಿಫಿಕೇಶನ್ ಪ್ರತ್ಯೇಕವಾಗಿ ನೀಡಲಾಗಿದೆ ಡೌನ್ಲೋಡ್ ಮಾಡಿಕೊಂಡು ಮಾಹಿತಿಗಳು ಓದಿಕೊಳ್ಳಿ ಸಮಯ ಕಡಿಮೆ ಇರೋದ್ರಿಂದ ಇಲ್ಲಿ ಬರಿಯಲಾಗಿಲ್ಲ.

ಕನಿಷ್ಠ ಎತ್ತರ 168 CM ಇರಬೇಕು.

ಅರ್ಜಿ ಹಾಕುವ ಪ್ರಮುಖ ದಿನಾಂಕಗಳು :

  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ. 23/11/2026
  •  ಕೊನೆಯ ದಿನಾಂಕ : ಡಿಸೆಂಬರ್ 22,2026
  •  ಶುಲ್ಕ ಪಾವತಿ Last Date : 23/12/2026

ಆನ್ಲೈನ್ ನಲ್ಲಿ ಅರ್ಜಿ ಹಾಕುವ ವಿಧಾನ :

1. ಮೊದಲಿಗೆ ಅಧಿಕೃತ “KSFES” ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ

2. Register ಮಾಡಿಕೊಳ್ಳಬೇಕು.

3. ನಂತರ ಲಾಗಿನ್ ಮಾಡಿಕೊಳ್ಳಿ.

4. ಅಗ್ನಿಶಾಮಕ ಮತ್ತು ಠಾಣಾಧಿಕಾರಿ ಹುದ್ದೆಗೆ ಕೇಳುವ ದಾಖಲೆಗಳು ಮತ್ತು ವೈಯಕ್ತಿಕ ಮಾಹಿತಿಗಳು ಸಲ್ಲಿಸಿ.

5. ಶುಲ್ಕ ಕೇಳಿದರೆ ಪಾವತಿಸಿ.

6. Document”ಅಪ್ಲೋಡ್ ಮಾಡಬೇಕು( ಒರಿಜಿನಲ್ ಅಥವಾ ಜೆರಾಕ್ಸ್).

7. ಅಪ್ಲಿಕೇಶನ್ ಸರಿ ಇದ್ದಲ್ಲಿ “Submit”ಮಾಡಿ

ಸುದ್ದಿ ಬರಹಗಾರರು : ಕರ್ನಾಟಕ ಪ್ರಶಾಂತ್ ಮೀಡಿಯಾ ತಂಡದವರು ಮಾಹಿತಿ ನೀಡಿರುತ್ತಾರೆ.