ಕರ್ನಾಟಕದಲ್ಲಿ ಗಸ್ತು ಅರಣ್ಯಪಾಲಕ 450 ಹುದ್ದೆಗೆ ಅರ್ಜಿ ಆಹ್ವಾನ! ಮಹಿಳೆಯರು ಮತ್ತು ಪುರುಷರು ಆನ್ಲೈನ್ ಮೂಲಕ ಇವತ್ತೇ ಅರ್ಜಿ ಸಲ್ಲಿಸಿ! 12ನೇ ತರಗತಿ ಮುಗಿಸಿದವರಿಗೆ ಇದೊಂದು ಸುವರ್ಣ ಅವಕಾಶ! ಅರ್ಜಿ ಹೇಗೆ ಹಾಕೋದು? ದಾಖಲೆಗಳು? ಅರ್ಹತೆಗಳೇನು? ಸಂಪೂರ್ಣ ಮಾಹಿತಿಗೆ ಲೇಖನಿ ಓದಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನೀವು ದ್ವಿತೀಯ ಪಿಯುಸಿ ಪಾಸ್ ಆಗಿದ್ದೀರಾ? ಅರಣ್ಯ ವಿಭಾಗದಲ್ಲಿ ಕೆಲಸ ಹುಡುಕುತ್ತಿದ್ದೀರಾ? ಒಳ್ಳೆ ಸಂಬಳ ಇರುವ ಸರ್ಕಾರಿ ನೌಕರಿ ಹುಡುಕುತ್ತಿದ್ದೀರಾ? ಹಾಗಾದ್ರೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಬೀಟ್ ಫಾರೆಸ್ಟರ್ ಹುದ್ದೆಗೆ 17-11-2026 ರಂದು ಹೊಸ ಅಧಿಸೂಚನೆ ಪ್ರಕಟ ಆಗಿದೆ. ಇದಕ್ಕೆ ಮಾಜಿ ಸೈನಿಕರು ಮತ್ತು ತೃತೀಯಲಿಂಗ ಮಹಿಳೆಯರು ಹಾಗೂ ಈಗಾಗಲೇ ಅರಣ್ಯ ಭಾಗದಲ್ಲಿ ಸೇವೆ ಸಲ್ಲಿಸುವವರಿಗೆ ಅವಕಾಶ ಇರಲಿದೆ.
ಅರಣ್ಯ ಇಲಾಖೆ ನೇಮಕಾತಿ ವಿವರ :
ಸಂಸ್ಥೆ : ಕರ್ನಾಟಕ ಅರಣ್ಯ ಇಲಾಖೆ ( KFD) ನೇಮಕಾತಿ 2026
ಕೊನೆಯ ದಿನಾಂಕ : 22 ಡಿಸೆಂಬರ್ 2026
ಒಟ್ಟು ಹುದ್ದೆ : 450
ಅರ್ಜಿ ವಿಧಾನ : ಸಂಪೂರ್ಣ ಆನ್ಲೈನ್ ಮೂಲಕ
ಹುದ್ದೆಯ ಹೆಸರು ಮತ್ತು ಶೈಕ್ಷಣಿಕ ವಿವರ ( Posts Details & Qualification):
ಅರಣ್ಯ ಇಲಾಖೆಯಲ್ಲಿ ಗಸ್ತು ಅರಣ್ಯ ಪಾಲಕ( Beat Forester) ಹುದ್ದೆಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮಾನ್ಯತ ಪಡೆದ ಮಂಡಳಿ ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳಿಂದ ದ್ವಿತೀಯ ಪಿಯುಸಿ (12th) ಪೂರ್ಣಗೊಳಿಸಬೇಕು.
Beat Forester ಹುದ್ದೆಗೆ ವೈಯಮಿತಿ( Age limit):
- ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ
- ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 32 ವರ್ಷ
- SC -ST ಪ್ರವರ್ಗ ಅಭ್ಯರ್ಥಿಗಳಿಗೆ : 37 ವರ್ಷ
- ಹಿಂದುಳಿದ ವರ್ಗದ ಅಭ್ಯರ್ಥಿಗಳು OBC ಹಾಗೂ ಇತರ ವರ್ಗದವರಿಗೆ : 35 ವರ್ಷ
ಇಲ್ಲಿ ಗಮನಿಸಿ : ಈಗಾಗಲೇ ಅರಣ್ಯ ವಿಭಾಗದಲ್ಲಿ ಸೇವೆ ಸಲ್ಲಿಸುವವರಿಗೆ ಇಲಾಖೆ ವತಿಯಿಂದ 43/46/48 ವರ್ಷದವರೆಗೆ ಅವಕಾಶ ನೀಡಲಾಗಿರುತ್ತದೆ.
ವೇತನ ವಿವರ ( Salary):
ಅರಣ್ಯ ಇಲಾಖೆ ಗಸ್ತು ಅರಣ್ಯ ಪಾಲಕ ಹುದ್ದೆಗೆ ಪ್ರತಿ ತಿಂಗಳು ₹37500/- ರಿಂದ 76100/- ವರೆಗೆ ವೇತನ ಇರುತ್ತದೆ. ಪ್ರತಿ ವರ್ಷ ವೇತನ ಶ್ರೇಣಿ ರಾಜ್ಯ ಸರ್ಕಾರ ಮಾನದಂಡಗಳ ಪ್ರಕಾರ ಹೆಚ್ಚಿಗೆ ಮಾಡಲಾಗುತ್ತದೆ.
- 🔻: ಉದ್ಯೋಗ ಮಾಹಿತಿ: ನೇರ ನೇಮಕಾತಿ ಕರ್ನಾಟಕದಲ್ಲಿ GTTC ಸಂಸ್ಥೆಯಲ್ಲಿ ಸಹಾಯಕ ದ್ವಿತೀಯ ದರ್ಜೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- 🔻: ಇದನ್ನ ಓದಿ : ಚಾಮರಾಜನಗರ ಜಿಲ್ಲೆಯಲ್ಲಿ ಉದ್ಯೋಗ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
- 🔻 : ಇದನ್ನ ಓದಿ: ಪರೀಕ್ಷೆ ಇಲ್ಲದೆ ಬೆಂಗಳೂರ್ ರೈಲ್ವೆ ದಲ್ಲಿ ಉದ್ಯೋಗ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕದ ವಿವರ (Application Fees):
Beat Forester ಹುದ್ದೆಗೆ ವರ್ಗಕ್ಕೆ ತಕ್ಕಂತೆ ಅರ್ಜಿ ಶುಲ್ಕ ಇಲಾಖೆ ಕೊಟ್ಟಿರುತ್ತದೆ ಕೆಳಗಡೆ ಹಂತದ ಬಗ್ಗೆ ನೀಡಿದ್ದೇವೆ ನೋಡಿ.
- ಮಾಜಿ ಸೈನಿಕರ ತೃತೀಯಲಿಂಗ,SC ,ST ₹ 500/-
- ಸಾಮಾನ್ಯ ಅಭ್ಯರ್ಥಿಗಳು ಹಾಗೂ ಹಿಂದುಳಿದ ವರ್ಗದವರಿಗೆ ₹750/-
- ವಿಶೇಷ ಅಂಗವಿಕಲ್ದವರಿಗೆ :₹250/-
- ಪಾವತಿ ವಿಧಾನ ಆನ್ಲೈನ್ ಮೂಲಕ ಹಾಗೂ ಇತರೆ ಸೇವೆಗಳು ಲಭ್ಯ.
ವೃಂದಗಳ ವರ್ಗೀಕರಣ ವಿವರ :
- ಕಲ್ಯಾಣ ಕರ್ನಾಟಕ ವೃಂದ ( KK) 95 ಹುದ್ದೆಗಳು
- ಉಳಿಕೆ ಮೂಲ ವೃಂದ ( RPC ) 355 ಹುದ್ದೆಗಳು
- ಒಟ್ಟು 450 ಹುದ್ದೆಗಳು
ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ:
ಸ್ನೇಹಿತರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಎಲ್ಲಾ ವಿವರಗಳನ್ನು ನೀವು ಪಡೆದುಕೊಳ್ಳಬೇಕು ಕೆಳಗಡೆ ಕೊಟ್ಟಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ.
ಪ್ರಮುಖ ಲಿಂಕ್ ಗಳು :
- RPC ಗಸ್ತು ಅರಣ್ಯ ಪಾಲಕ ಹುದ್ದೆಯ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- KK Notification Pdf ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಅರ್ಜಿ ಸಲ್ಲಿಸುವ ದಿನಾಂಕಗಳು :
- ಅದಿಸೂಚನೆ ಬಿಡುಗಡೆ ದಿನಾಂಕ : 17-11-2026
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 23-11-2026
- ಕೊನೆಯ ದಿನಾಂಕ : 22-12-2026
- ಶುಲ್ಕ ಪಾವತಿ ಕೊನೆ ದಿನಾಂಕ : 23 ಡಿಸೆಂಬರ್ 2026
ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು?
1. ಅಧಿಕೃತ KFD ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಇಂಡಿ ಕ್ಲಿಕ್ ಮಾಡಿ.
2. ಮೊದಲು ಗಸ್ತು ಅರಣ್ಯ ಪಾಲಕ ಹುದ್ದೆಗೆ ಅಂತರ್ಜಾಲದಲ್ಲಿ Register ಮಾಡಿಕೊಳ್ಳಬೇಕು.
3. ನಂತರ ಲಾಗಿನ್ ಮಾಡಿಕೊಳ್ಳಬೇಕು.
4. ಎಲ್ಲಾ ವೈಯಕ್ತಿಕ ವಿವರ ಹಾಗೂ ಇಲಾಖೆ ಕೇಳುವ ಎಲ್ಲ ದಾಖಲೆಗಳ ಪ್ರಕಾರ ಮಾಹಿತಿ ತುಂಬಬೇಕು.
5. ಅರ್ಜಿ ಶುಲ್ಕ ಕೇಳಿದರೆ ಪಾವತಿಸಿ ಮತ್ತು ದಾಖಲೆಗಳು ಅಪ್ಲೋಡ್ ಮಾಡಿ.
6. ಎಲ್ಲ ಮಾಹಿತಿ ಸರಿ ಇದ್ದಲ್ಲಿ ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
7. ಮುಂದೆ ಬೇಕಾಗಬಹುದು ಅಪ್ಲಿಕೇಶನ್ ಪ್ರಿಂಟ್ ನಿಮ್ಮ ಬಳಿ ತೆಗೆದಿಟ್ಟುಕೊಳ್ಳಿ.
ಪ್ರಶಾಂತ್ ಮೀಡಿಯಾ :
ಮೇಲೆ ಬಂದಿರುವ ಎಲ್ಲಾ ಮಾಹಿತಿ ಅಧಿಕೃತ ನೋಟಿಫಿಕೇಶನ್ ಪ್ರಕಾರ ಹೇಳಿದ್ದೇವೆ ಅರಣ್ಯ ಇಲಾಖೆ ಮಾನದಂಡಗಳ ಪ್ರಕಾರ ಇರುತ್ತದೆ ಅರ್ಜಿ ಹಾಕುವ ಮುನ್ನ ನೋಟಿಫಿಕೇಷನ್ ಓದಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
