ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನೇಮಕಾತಿ 2026 – KERC Recruitment 2026 : ಸಂಪೂರ್ಣ ಮಾಹಿತಿ ನೋಡಿ

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ ನೇಮಕಾತಿ 2026 : KERC Recruitment 2026 – ಹೊಸ ಅಧಿಸೂಚನೆ ಪ್ರಕಟವಾಗಿದೆ, ಪದವಿ ಮುಗಿಸಿದವರಿಗೆ ಉದ್ಯೋಗ, ಯಾರಿಗೆ ಅವಕಾಶ? ಎಷ್ಟು ಹುದ್ದೆ ದಾಖಲೆಗಳೇನು ಹೀಗೆ ಸಂಪೂರ್ಣ ಮಾಹಿತಿ ಲೇಖನಿ ಓದಿ!

ಬೆಂಗಳೂರು : ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಇವತ್ತಿನ ಈ ಲೇಖನಿಯಲ್ಲಿ ಕರ್ನಾಟಕ ವಿದ್ಯುತ್ ಸಂಸ್ಥೆಯಲ್ಲಿ ( KERC) ಕರೆದಿರುವ “ವಿದ್ಯುತ್ ಲೋಕಪಾಲರು” ಉದ್ಯೋಗದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಅರ್ಜಿ ಹೇಗೆ ಹಾಕೋದು? ಕೆಲಸದ ವಿಧಾನ ಹೇಗೆ? ಶೈಕ್ಷಣಿಕ ಅರ್ಹತೆಯನ್ನು? Age limit? ಹೇಗೆ ಎಲ್ಲ ಮಾಹಿತಿಗಳು ತಿಳಿದುಕೊಳ್ಳೋಣ. ಅರ್ಜಿ ಆಫ್ ಲೈನ್ ಮೂಲಕ 23 ಅಕ್ಟೋಂಬರ್ ದಿಂದ ಪ್ರಾರಂಭವಾಗಿರುತ್ತದೆ.

KERC ನೇಮಕಾತಿ ವಿವರ :

ಸಂಸ್ಥೆ : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ( KERC Recruitment 2026)

ಸಂಬಳ : 80000/- ವರೆಗೆ ಇರುತ್ತದೆ

ಶೈಕ್ಷಣಿಕ ಅರ್ಹತೆ : ಪದವಿ ಮುಗಿಸಬೇಕು.

ಸ್ಥಳ & ಒಟ್ಟು ಹುದ್ದೆ : 01 ಹುದ್ದೆ- ಕರ್ನಾಟಕ ಬೆಂಗಳೂರಿನಲ್ಲಿ ಕೆಲಸ

ಹುದ್ದೆಯ ವಿವರ & ಶೈಕ್ಷಣಿಕ ಅರ್ಹತೆಗಳೇನು ( Posts Details & Qualification):

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ, ವಿದ್ಯುತ್ ಲೋಕಪಾಲರು ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಮುಗಿಸಿರಬೇಕು.

– ಈಗಾಗಲೇ ವಿದ್ಯುತ್ ಸರಬರಾಜು ಹಾಗೂ ವಿದ್ಯುತ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಮತ್ತು ಈಗಾಗಲೇ ವಿದ್ಯುತ್ ನಿಯಂತ್ರಣ ಮಾಡಲು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಜ್ಞಾನ ಹೊಂದಿರಬೇಕು.

– ಹೆಚ್ಚಿನ ಆದ್ಯತೆ ಈ ಮೇಲೆ ಕೊಟ್ಟಿರುವ ಅಭ್ಯರ್ಥಿಗಳಿಗೆ ಇರುತ್ತದೆ

ಸಂಬಳ ಎಷ್ಟಿರುತ್ತೆ? & ವಯಮಿತ ವಿವರ( Age limit & Salary Details):

• ವಿದ್ಯುತ್ ಲೋಕೋಪಾಲರು ಹುದ್ದೆಗೆ ಪ್ರತಿ ತಿಂಗಳು ₹80000/- ವರೆಗೆ ಸಂಬಳ ನೀಡಲಾಗುವುದು ನೀಡಲಾಗಿರುತ್ತದೆ.

• ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ವಯೋಮಿತಿ ಗರಿಷ್ಠ 65 ವರ್ಷದ ಒಳಗಡೆ ಇರಬೇಕು.

ಸ್ನೇಹಿತರೆ ಇಲ್ಲಿ ಗಮನಿಸಿ :

ಇದು ಕರ್ನಾಟಕ ಸರ್ಕಾರ ಅಧಿಸೂಚನೆ ಆದರೆ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇಲ್ಲಿ ಹೆಚ್ಚಿನ ಅನುಭವಿದವ್ರಿಗೆ ಆದ್ಯತೆ ಒದಗಿಸಲಾಗುತ್ತದೆ ಆದ ಕಾರಣ ಇದು ಖಾಯಂ ಹುದ್ದೆಗಾಗಿ ಕಾಯುವ ಅಭ್ಯರ್ಥಿಗಳಿಗೆ ಅಷ್ಟೊಂದು ಈ ಹುದ್ದೆ ಅನುಕೂಲಕರ ಅಲ್ಲ.

ಆಯ್ಕೆ ವಿಧಾನ :

ಈಗಾಗಲೇ ಕೆಲಸ ಮಾಡಿದ ಅನುಭವ ಮತ್ತು ಅಂಕದ ಆಧಾರ ಹಾಗೂ ದಾಖಲೆಗಳ ಪರಿಶೀಲನೆ ನಿರ್ದಿಷ್ಟ ಪಡಿಸಿದರೆ ಪರೀಕ್ಷೆ ಕೂಡ ಇರಬಹುದು.

KERC ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕದ ವಿವರ :

ಈ ನೇಮಕಾತಿಗೆ KERC ಸಂಸ್ಥೆಯಿಂದ ಶುಲ್ಕ ಇರುತ್ತದೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

• ಇಲ್ಲಿ ಶುಲ್ಕ ಅಭ್ಯರ್ಥಿಗಳಿಗೆ : 1000 ಗಳ ಡಿಮ್ಯಾಂಡ್/ SC ,ST ವರ್ಗದವರಿಗೆ 100/- ನೀಡಲಾಗಿದೆ ಇದು KERC ಸಂಸ್ಥೆಯ ಕಾರ್ಯದರ್ಶಿ ಅವರ ಹೆಸರಿನಲ್ಲಿ ಅರ್ಜಿಗಳನ್ನು ತೆಗೆದುಕೊಂಡು ಅರ್ಜಿಯ ಜೊತೆಗೆ ಸಲ್ಲಿಸಬೇಕಾಗುತ್ತದೆ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.

ಪ್ರಮುಖ ದಿನಾಂಕ ವಿವರ :

ಆಫ್ ಲೈನ್ನಲ್ಲಿ ಅರ್ಜಿ ಪ್ರಾರಂಭವಾಗಿರುವ 23 ಅಕ್ಟೋಂಬರ್ 2026 ರಿಂದ 12 ನವೆಂಬರ್ 2026 ವರೆಗೆ ಅವಕಾಶ ನೀಡಲಾಗಿದ್ದು. ಶುಲ್ಕ ಪಾವತಿ ಮಾಡಲು ಇದರ ಜೊತೆಗೆ ಬೇರೆ ದಿನಾಂಕ ಕೊಟ್ಟಿಲ್ಲ.

ಆಫ್ ಲೈನಲ್ಲಿ ಅರ್ಜಿ ಹಾಕೋದು ಹೇಗೆ?

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಅಧಿಕೃತ ಅಂತರ್ಜಾಲ ಅಥವಾ ಮೇಲಗಡೆ ಕೊಟ್ಟಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಅರ್ಜಿ ನಮೂನೆ ಇದೆ ಅದನ್ನ ಸರಿಯಾಗಿ ತುಂಬಿ ದಾಖಲೆಗಳ ಸಮೇತ ಮತ್ತು ಎಲ್ಲಾ ದಾಖಲೆಗಳು ಅದಕ್ಕೆ ಲಗತಿಸಿ ಅಂಚೆ ಕಚೇರಿ ಮೂಲಕ ಅಂಚೆ ವಿಳಾಸಕ್ಕೆ ಅರ್ಜಿ ಭರ್ತಿ ಮಾಡಬೇಕು.