KEA Mandatory Kannada Exam 2026: ಜುಲೈ 19ರಂದು ಪರೀಕ್ಷೆ, ಯಾರು ಬರೆಯಬೇಕು? ಯಾರು ಬರೆಯಬಾರದು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ದಿನಾಂಕ ಪ್ರಕಟವಾಗಿದೆ.PC ಗ್ರೂಪ್ ಸಿ ಮತ್ತು ಗ್ರೂಪ್ ಬಿ ಹುದ್ದೆಗಳ ಪರೀಕ್ಷೆ ಯಾವ ದಿನಾಂಕಕ್ಕೆ ಪರೀಕ್ಷೆ? ಈ ಪರೀಕ್ಷೆ ಯಾರು ಬರೆಯಬೇಕು? ಯಾರು ಬರೆಯಬಾರದು ಸಂಪೂರ್ಣ ಮಾಹಿತಿ.

 

ಬೆಂಗಳೂರು : KEA ಪರೀಕ್ಷಾ ಪ್ರಾಧಿಕಾರದಿಂದ 03-07-2026 ರಂದು ಅಧಿಸೂಚನೆ ಪ್ರಕಟ ಮಾಡಿದೆ. ನೀವು ಪರೀಕ್ಷೆ ಬರಿಬೇಕಾ? ಅಥವಾ ಬರೆಯಬಾರದ ಸಂಪೂರ್ಣ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ

ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಯಾರು ಬರೆಯಬೇಕು?

  •  ನೀವು SSLC/PUC ಅಥವಾ ತತ್ಸಮಾನದಲ್ಲಿ ಕನ್ನಡ ವಿಷಯ ಅಥವಾ ಕನ್ನಡ ಭಾಷೆಯನ್ನಾಗಿ ಪರೀಕ್ಷೆ ಬರೆದಿಲ್ಲ ಅಂದರೆ ಈ ಪರೀಕ್ಷೆ ಬರೆಯಬೇಕು.
  •  ಪದವಿಯಲ್ಲಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಶೈಕ್ಷಣಿಕ ಅರ್ಹತೆಯಲ್ಲಿ ನೀವೇನಾದರೂ ಕನ್ನಡ ಭಾಷೆಯ ವಿಷಯನಾಗೆ ಪರೀಕ್ಷೆ ಬರೆದಿಲ್ಲ ಅಂದರೆ ಈ ಪರೀಕ್ಷೆ ಬರೆಯಬೇಕು.
  •  ಈಗಾಗಲೇ ಕರ್ನಾಟಕ ಸರ್ಕಾರ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಈ ಹಿಂದೆ ನಡೆದಿರುವ ಹುದ್ದೆಗಳ ಪರೀಕ್ಷೆಗಳಲ್ಲಿ ಬರೆದಿಲ್ಲ ಅಂದರೆ ಈಗ ಬರೆಯಬೇಕು.
  •  ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದಿಲ್ಲ ಅಂದರೆ ಈ ಪರೀಕ್ಷೆ ಬರೆಯಿರಿ.
  •  ಈ ಹಿಂದೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಪರೀಕ್ಷೆ ಬರೆದಿಲ್ಲ ಈ ಪರೀಕ್ಷೆ ಬರೆಯಬೇಕು.

ಯಾರು ಈ ಪರೀಕ್ಷೆ ಬರೆಯಬಾರದು? ಅಥವಾ ಬರೆಯಲಿಲ್ಲಂದರೂ ನಡೆಯುತ್ತೆ?

  •  ಈಗಾಗಲೇ ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ವಿಷಯ ನಾಗಿ ಪರೀಕ್ಷೆ ಬರೆದರೆ ನಿಮಗೆ ಬರೆಯಲಿಲ್ಲಂದರೂ ನಡೆಯುತ್ತೆ.
  •  ಪದವಿಯಲ್ಲಿ ಕನ್ನಡ ಭಾಷೆಯನ್ನಾಗಿ ಪರೀಕ್ಷೆ ಬರೆದಿದ್ದರೆ ಇದು ಪರೀಕ್ಷೆ ಬರೆಯಲಿಲ್ಲಂದರೂ ನಡೆಯುತ್ತೆ.
  •  ಈ ಹಿಂದೆ ಯಾವುದಾದರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಕಡ್ಡಾಯ ವಿಷಯ ನಾಗಿ ಪರೀಕ್ಷೆ ಬರೆದಿದ್ದಾರೆ ಈ ಪರೀಕ್ಷೆ ಬರೆಯಬೇಡಿ.
  •  ಖಾಸಗಿ ಶಾಲೆ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ನೀವೇನಾದರೂ ಕನ್ನಡ ಭಾಷೆ ಪರೀಕ್ಷೆ ಬರೆದಿದ್ದಾರೆ ಒಂದು ವಿಷಯವನ್ನಾಗಿ ಈ ಪರೀಕ್ಷೆ ಬರೆಯಬೇಡಿ.

ಇಲ್ಲಿ ಗಮನಿಸಿ : ಇನ್ನಷ್ಟು ಹೆಚ್ಚಿನ ಮಾಹಿತಿ ನೀವು ತಿಳ್ಕೊಬೇಕು ಅಂದರೆ ಅಧಿಕೃತ ಅದು ಸೂಚನೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳು ಪಡೆದುಕೊಳ್ಳಿ.

ಕಡ್ಡಾಯ ಕನ್ನಡ ಪರೀಕ್ಷೆ ಯಾವ ದಿನಾಂಕಕ್ಕೆ ಇರುತ್ತೆ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ 19-7-2026 ರಂದು ಭಾನುವಾರ ನಡೆಯಲಿದೆ ಬೆಳಗ್ಗೆ 10:30 ನಿಮಿಷದಿಂದ ಮಧ್ಯಾಹ್ನ 12:30 ನಿಮಿಷದವರೆಗೆ.

ಯಾವ ಹುದ್ದೆಗೆ ಈ ಪರೀಕ್ಷೆ ಇದೆ?
  1.  ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
  2.  ಗ್ರೂಪ್ ಸಿ
  3.  ಗ್ರೂಪ್ ಬಿ

ಈ ಹುದ್ದೆಗಳಿಗೆ ದಿನಾಂಕ 19 ಜುಲೈ 2026ರಂದು ಪರೀಕ್ಷೆ ನಡೆಯಲಿದೆ.

ಕಡ್ಡಾಯ ಕನ್ನಡ ಪರೀಕ್ಷೆಯ Notification ನೋಡಲು ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಗಳಿಗೆ ನಮ್ಮ ಸಲಹೆ :

ನೋಡಿ ಇದು ಪರೀಕ್ಷೆ ಎಲ್ಲರಿಗೂ ಬರೆಯಲು ಅವಕಾಶ ಇಲ್ಲ ಕೆಲವರಿಗೆ ಮಾತ್ರ ಇದೆ ಅರ್ಹತೆಗಳು ನೇಮಗಳು ಅಧಿಸೂಚನೆಯಲ್ಲಿದೆ ನೋಡಿ ಮತ್ತು ಯಾರು ಈ ಹಿಂದೆ ಪರೀಕ್ಷೆ ಬರೆದಿಲ್ಲ ಈ ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲೇಬೇಕು.