ಕರ್ನಾಟಕದಲ್ಲಿ ಆಶಾ ಕಾರ್ಯಕರ್ತರಿಗೆ ಸಂಬಳ ಹೆಚ್ಚಳ! DK ಶಿವಕುಮಾರ್ ಹೇಳಿದ್ದೇನು?

ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ₹15000/- ದಿಂದ 20000/- ವರೆಗೆ ವೇತನ! DK ಶಿವಕುಮಾರ್! ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಹೋರಾಟ! ಕಾರ್ಯಕರ್ತೆರ ಬೇಡಿಕೆಗಳೇನು? ಸರ್ಕಾರ ಹೇಳಿದ್ದೇನು? ಸಂಪೂರ್ಣ ಮಾಹಿತಿ ಲೇಖನಿ ಓದಿ.

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಕರ್ನಾಟಕ ರಾಜ್ಯದ್ಯಂತ ಆಶಾ ಕಾರ್ಯಕರ್ತೆಯರು ಇವತ್ತಿಗೆ 7ನೇ ದಿನಕ್ಕೆ ಕಾಲಿಟ್ಟ ಕಾರ್ಯಕರ್ತರ ಹೋರಾಟ.17 ರಿಂದ 20 ಜನ ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು. ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತರ ಆಕ್ರೋಶ! ಹೋರಾಟ ಯಾವಾಗ ಮುಗಿಯುತ್ತೆ? ಸಂಬಳ ಎಷ್ಟು ಹೆಚ್ಚಿಗೆ ಮಾಡುತ್ತಾರೆ? ಕರ್ನಾಟಕ ಮುಖ್ಯಮಂತ್ರಿ ( CM ) ಹೇಳಿದ್ದೇನು?

 

ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಆಶಾ ಕಾರ್ಯಕರ್ತರ ಹೋರಾಟ :

ಹೌದು ಸ್ನೇಹಿತರೆ ಇವತ್ತಿಗೆ 7 ದಿನಗಳಾಯ್ತು ರಾಜ್ಯದ ಎಲ್ಲಾ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಬಂದು ಫ್ರೀಡಂ ಪಾರ್ಕಿನಲ್ಲಿ ಯಾವುದೇ ಜನರಿಗೆ ಹಾಗೂ ಅಂಗಡಿ ರಸ್ತೆ ವಾಹನಗಳಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರ ಬೇಡಿಕೆಗಳು:

ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದಲ್ಲಿ ಇವರು ಕೆಲಸ ಮಾಡುತ್ತಾರೆ. ಸರ್ಕಾರಕ್ಕೆ  ಪ್ರಮುಖ 07 ಬೇಡಿಕೆಗಳು ಇವರು ಇಟ್ಟಿರುತ್ತಾರೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

  1.  ಸರ್ಕಾರ ಈಗ ಪ್ರಸ್ತುತ ಕೊಡುವ ಗೌರವ ಧನ ವ್ಯವಸ್ಥೆ ಬದಲಾಗಿ ಮಾಸಿಕ ₹15000/- ಸರ್ಕಾರ ಸಂಬಳ ನೀಡಬೇಕು.
  2.  ಆರೋಗ್ಯ ಇಲಾಖೆ ಹೊರತುಪಡಿಸಿ ಬೇರೆ ಯಾವುದೇ ಇಲಾಖೆಯಲ್ಲಿ ಆಶಾ ಕಾರ್ಯಕರ್ತರಿಗೆ ಕೆಲಸ ನೀಡುವುದನ್ನು ನಿಲ್ಲಿಸಬೇಕು.
  3.  ಸರ್ಕಾರದಿಂದ ಮೊಬೈಲ್ ಮತ್ತು ರಿಚಾರ್ಜ್ ವ್ಯವಸ್ಥೆ ಮಾಡಿಕೊಡಬೇಕು.
  4.  ಈ ಹಿಂದೆ ಕೆಲಸ ಮಾಡಿದ ಆಶಾ ಕಾರ್ಯಕರ್ತರ ಸಹಾಯಧನ ಹಾಗೂ ಪ್ರೋತ್ಸಾಹ ಧನ & ವೇತನ ಸರ್ಕಾರ ರಿಲೀಸ್ ಮಾಡಬೇಕು.
  5.  ಆಶಾ ಕಾರ್ಯಕರ್ತೆಯರಿಗೆ ನಿವೃತ್ತಿ ಆದ ಮೇಲೆ ₹5 ಲಕ್ಷ ಪರಿಹಾರ ಹಣ ನೀಡಬೇಕು.
  6.  2025ರಲ್ಲಿ ಕೆಲಸದಿಂದ ಹಿಂದಕ್ಕೆ ತೆಗೆದುಕೊಂಡಿರುವಂತ( ಹಿಂಪಡೆದಿರುವ) ಆಶಾ ಕಾರ್ಯಕರ್ತರಿಗೆ ಮರು ನೇಮಕ ಮಾಡಬೇಕು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
  7.  ಹೆರಿಗೆ ರಜೆ, ಆರು ತಿಂಗಳ ವೇತನದೊಂದಿಗೆ ಸರ್ಕಾರ ಒದಗಿಸಬೇಕು.

ಈ ಮುಖ್ಯವಾಗಿರುವ ಬೇಡಿಕೆಗಳು ವಿವರ ಮೇಲ್ಗಡೆ ನೀಡಿದ್ದೇವೆ.

🔻: ಇದನ್ನ ಓದಿ : ಪರೀಕ್ಷೆ ಇಲ್ಲದೆ ಅಗ್ನಿಶಾಮಕ ಮತ್ತು ಠಾಣಾಧಿಕಾರಿ ಹುದ್ದೆಗೆ ಕರ್ನಾಟಕದಲ್ಲಿ ನೇಮಕಾತಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಮುಖ್ಯಮಂತ್ರಿ ಹೇಳಿದ್ದೇನು?

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯೊಂದಿಗೆ ಮಾತಾಡಿ ” ವೇತನ ₹10000/- ರಿಂದ 15000/- ನೀಡುವುದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ, ಒಂದು ಇಲಾಖೆ ಹೆಚ್ಚಿಗೆ ಮಾಡಿದರೆ ಮತ್ತೆ ಉಳಿದ ಇಲಾಖೆ ವೇತನ ಹೆಚ್ಚಿಗೆ ಮಾಡಲಾಗುವುದು “ಎಂದು ಮಾತುಕತೆಯಲ್ಲಿ ಅಷ್ಟೇ ಹೇಳಿದ್ದಾರೆ . ಇನ್ನು ಸ್ಪಷ್ಟನೆ ನೋಟಿಫಿಕೇಶನ್ ಆಗಲಿ ಅಥವಾ ಆರ್ಡರ್ ಮೂಲಕ ಮಾಹಿತಿ ನೀಡಿಲ್ಲ.

ಪ್ರಶಾಂತ್ ಮೀಡಿಯಾ ಸಲಹೆ :

ಆಶಾ ಕಾರ್ಯಕರ್ತೆಯರು ಬೇಡುತ್ತಿರುವ ₹15000/- ವೇತನ ಬದಲು ₹18000/- ದಿಂದ ₹20000/- ವರೆಗೆ ಸರ್ಕಾರ ಕಾರ್ಯಕರ್ತರಿಗೆ ವೇತನ ನೀಡಬೇಕು. ಈಗ ಪ್ರಸ್ತುತ ಎಲ್ಲ ದರವನ್ನ ಹೆಚ್ಚಿಗೆ ಮಾಡಲಾಗುತ್ತಿದೆ , ಪ್ರತಿ ವರ್ಷ ಸರ್ಕಾರಿ ನೌಕರ ವೇತನ ಹೆಚ್ಚಿಗೆ ಮಾಡುತ್ತಾರೆ. ಆದರೆ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಈ ಆಶಾ ಕಾರ್ಯಕರ್ತೆಯರ ಸಂಬಳ ಯಾಕೆ ಹೆಚ್ಚಿಗೆ ಮಾಡ್ತಾ ಇಲ್ಲ? ರಾತ್ರಿ ಅನ್ನದೇ ಹಗಲು ಅನ್ನದೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಇವರಿಗೆ ನ್ಯಾಯ ಸಿಗಬೇಕು.

ಆಶಾ ಕಾರ್ಯಕರ್ತರ ಗಮನಕ್ಕೆ :

ನೀವು ಕೇಳುತ್ತಿರುವ ಸಂಬಳ ಕಡಿಮೆ ಈಗ ಪ್ರಸ್ತುತ ಗೌಂಡಿ ಕೆಲಸಗಾರರು ಪ್ರತಿದಿನ ₹700 ಪ್ರತಿ ತಿಂಗಳು : ₹21000/- ದುಡಿಯುತ್ತಿದ್ದಾರೆ. ಅಂತದ್ರಲ್ಲಿ ನೀವು ರಾತ್ರಿ ಅನ್ನದೇ ಹಗಲು ಅನ್ನದೆ ದುಡಿಯುತ್ತೀರಿ ನಿಮಗೆ ಯಾಕೆ? ಸಂಬಳ ಕಡಿಮೆ ಆಶಾ ಕಾರ್ಯಕರ್ತರಿಗೆ ಸರಕಾರದಿಂದ ₹18000/- ರಿಂದ ₹20000/- ವರೆಗೆ ಸಂಬಳ ನೀಡಬೇಕು

ಸರ್ಕಾರಿ ನೌಕರ ವೇತನ:( Government Employees Salary):

ಸರ್ಕಾರಿ ನೌಕರ ಕಡಿಮೆ ಅಂದರೇನು ₹30000/- ಸಂಬಳ ಇದೆ ಇವರು ಬೆಳಗ್ಗೆ 10 ಗಂಟೆ 30 ನಿಮಿಷದಿಂದ ಸಂಜೆ 5:00 ವರೆಗೆ ಕೆಲಸ ಮಾಡುತ್ತಾರೆ. ಇವರಿಗೆ ಇಷ್ಟೊಂದು ಸಂಬಳ ಆದರೆ ಅದೇ ಆಶಾ ಕಾರ್ಯಕರ್ತೆಯರು ಇವರಿಗೆ ಸಮಯ ಇಲ್ಲ ರಾತ್ರಿ 1 ಗಂಟೆ, ರಾತ್ರಿ 12 ಗಂಟೆ ರಾತ್ರಿ 4:00 ಆದ್ರೂ ಕೆಲಸದ ಮೇಲೆ ಇವರು ಹೋಗಬೇಕು ಕಷ್ಟಪಟ್ಟು ದುಡಿಯುವ ಮಹಿಳೆಯರಿಗೆ ಸರ್ಕಾರ ಮೋಸ ಮಾಡುತ್ತಿದೆ ಇವರು ಮಾಡುತ್ತಿರುವ ಹೋರಾಟಕ್ಕೆ ನಿಗದಿ ಸಂಬಳ ನೀಡಬೇಕು. ಪ್ರಶಾಂತ್ ಮೀಡಿಯಾ ಮಧ್ಯಮದಿಂದ ಆಶಾ ಕಾರ್ಯಕರ್ತರಿಗೆ ” ₹18000/- ರಿಂದ ₹20000/- ವರೆಗೆ” ಸಂಬಳ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ.

ಮಹಿಳೆಯರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು :

ಹೌದು ನವೆಂಬರ್ 17 ರಿಂದ ಈ ಹೋರಾಟ ಪ್ರಾರಂಭವಾಗಿದೆ ಇದರಲ್ಲಿ ಹಲವಾರು ಮಹಿಳೆಯರು ವೈಯಕ್ತಿಕ ಆರೋಗ್ಯ ಮತ್ತು ಅನಾರೋಗ್ಯ, ಆರೋಗ್ಯದಿಂದ ಬಳಲುತ್ತಿದ್ದು ಇವತ್ತಿಗೆ ಒಂದು ವಾರ ಆಯ್ತು, ಸರ್ಕಾರ ಒಂದನೇ ಮಾಡಿಲ್ಲ ಸುಮಾರು 20 ರಿಂದ 30 ಜನ ಮಹಿಳೆಯರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಯಾರು ಹೊಣೆ?

🔻: ಇದನ್ನ ಓದಿ : ಅರ್ಜಿ ಆಹ್ವಾನ! ಕರ್ನಾಟಕ ಸರ್ಕಾರ ನೇಮಕಾತಿ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರ ಸುಳ್ಳು ಆಶ್ವಾಸನೆ:

ಹೌದು ಈ ಹಿಂದೆ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನಿರ್ದಿಷ್ಟ ವೇತನ ನೀಡುವುದಾಗಿ ಹೇಳಿತ್ತು ಅದು ಸುಳ್ಳಾಯಿತು ಈಗ ಸರ್ಕಾರ ಯಾವ ಆಧಾರದ ಮೇಲೆ ನಮಗೆ ವೇತನ ನೀಡುತ್ತೆ ಎಂದು ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ? ಇದಕ್ಕೆ ಸರ್ಕಾರ ಉತ್ತರ ನೀಡಬೇಕು!

ಕರ್ನಾಟಕ ಮಹಿಳಾ ಆಯೋಗ:

ಯಾವಾಗಲೂ ಮಹಿಳೆಯರ ಪರವಾಗಿ ನಿಲ್ಲುವ ಮಹಿಳಾ ಆಯೋಗ ಈಗ ಸದ್ಯ ಆಶ ಕಾರ್ಯಕರ್ತರು ಹೋರಾಟಕ್ಕಿಳಿದರು ಸ್ಪಂದನೆ ಮಾಡ್ತಾ ಇಲ್ಲ ಆಯೋಗ ಕಾರಣವೇನು? ಇದರ ಹಿಂದಿನ ರಹಸ್ಯ ಏನು?

ಕಾರ್ಯಕರ್ತರ ಮನವಿ :

ಸರ್ಕಾರ ಬೇಗ ಸ್ಪಂದನೆ ಮಾಡಬೇಕು ನಾವು ಕೇಳುತ್ತಿರುವ ಬೇಡಿಕೆ ಈಡೇರಿಸಬೇಕು ಸರ್ಕಾರದಿಂದ ಸಿಗುವ ಸೌಲಭ್ಯಗಳು ನಮಗೆ ದೊರೆಯಬೇಕು ಬೇಗ ಸರಕಾರದಿಂದ ಉತ್ತರಕ್ಕಾಗಿ ಆಶಾ ಕಾರ್ಯಕರ್ತೆಯರು ಕಾಯುತ್ತಿದ್ದಾರೆ.