KEA new Recruitment- 247 ಹುದ್ದೆಗಳು ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ 2026 ಸಂಪೂರ್ಣ ಮಾಹಿತಿ

ಕರ್ನಾಟಕ ಸರ್ಕಾರ ಮತ್ತೊಂದು ಹೊಸ ಅಧಿಸೂಚನೆ ಪ್ರಕಟವಾಗಿದೆ KEA ಸಂಸ್ಥೆಯಲ್ಲಿ ಖಾಲಿ ಇರುವ 247 ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ!

KEA ಸಂಸ್ಥೆಯಲ್ಲಿ ಕಾಲೇಜು ಮಟ್ಟದಲ್ಲಿ ಕೆಲಸ ಮಾಡಬೇಕಾ? ಪ್ರಾಂಶುಪಾಲರು ಹುದ್ದೆಗೆ ಕಾಯುತ್ತಿದ್ದೀರಾ? ಹಾಗಾದ್ರೆ ಸೆಪ್ಟೆಂಬರ್ 03ರಂದು ಅಧಿಸೂಚನೆ ಪ್ರಕಟ ಮಾಡಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಸ್ಥೆ ನೇಮಕಾತಿಗೆ ಹೇಗೆ ಅರ್ಜಿ ಹಾಕುವುದು? ಪ್ರಮುಖ ದಾಖಲೆಗಳು? ಸಂಪೂರ್ಣ ಮಾಹಿತಿ

ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆ? ಉದ್ಯೋಗದ ಸ್ಥಳ ಎಲ್ಲಿ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA ) 247 ಪ್ರಾಂಶುಪಾಲರು ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ, ಅಖಿಲ ಕರ್ನಾಟಕದಲ್ಲಿ ಕೆಲಸ.

ಶೈಕ್ಷಣಿಕ ಅರ್ಹತೆಯನ್ನು ಮತ್ತು ವಯೋಮಿತಿ?

• Education : ಅರ್ಜಿದಾರರು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ತಮ್ಮ ವಿದ್ಯಾರ್ಹತೆ ಪೂರ್ಣಗೊಳಿಸಬೇಕು ಮತ್ತು ಕನಿಷ್ಠ 10 ವರ್ಷದವರೆಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಬೇಕು ಹಾಗೂ ಈಗಾಗಲೇ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರಬೇಕು

• Age limit : ಕನಿಷ್ಠ ವೈಮಿತಿ ಕೊಟ್ಟಿಲ್ಲ ಈಗಾಗಲೇ ಹತ್ತು ವರ್ಷದವರೆಗೆ ಉಪನ್ಯಾಸಕರಾಗಿ ಸೇವೆ ಇರುವುದರಿಂದ ಗರಿಷ್ಠ ವಯೋಮಿತಿ ಅನ್ವಯಿಸುವುದಿಲ್ಲ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.

ಅಭ್ಯರ್ಥಿಗಳ ಗಮನಕ್ಕೆ :

ಈ ನೇಮಕಾತಿಗೆ ಫ್ರೆಷರ್ ಹಾಗೂ ಸಾಮಾನ್ಯ ಪದವಿ ಹೊಂದಿದವರಿಗೆ ಅವಕಾಶ ಇಲ್ಲ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರಬೇಕು ಹಾಗೂ ಹತ್ತು ವರ್ಷದವರೆಗೆ ಸೇವೆ ಹೊಂದಿರಬೇಕು ಇಂಥವರಿಗೆ ಅವಕಾಶ ನೀಡಲಾಗಿದೆ.

ಆಯ್ಕೆ ವಿಧಾನ ಹೇಗಿರುತ್ತೆ? ಅರ್ಜಿ ಶುಲ್ಕ ಎಷ್ಟು?

  •  ಶುಲ್ಕ ಅಂಗವಿಕಲ ಅಭ್ಯರ್ಥಿಗಳಿಗೆ : 500/-
  •  ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಮಾಜಿ ಸೈನಿಕರಿಗೆ : 1000/-
  •  ಹಿಂದುಳಿದ ವರ್ಗ ಸಾಮಾನ್ಯ ವರ್ಗದವರಿಗೆ : 1500/-

ಆಯ್ಕೆ :

  •  ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನ ಅಂತಿಮ ಮೆರಿಟ್ ಮೇಲೆ ಹಾಗೂ ಅರ್ಹತೆ ಆಧಾರದ ಮೇಲೆ ಆಯ್ಕೆ

KEA 247 ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

RPC Notification Pdf click here 

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು?

  •  ಆನ್ಲೈನ್ ಮೂಲಕ ಅರ್ಜಿ ಪ್ರಾರಂಭ : 07-09-2026
  •  ಕೊನೆಯ ದಿನಾಂಕ : 04-10-2026
  •  ಅರ್ಜಿ ಶುಲ್ಕ ಕೊನೆ ದಿನಾಂಕ : 05-10-2026

ಯಾವ ವೃಂದದವರಿಗೆ ಎಷ್ಟು ಹುದ್ದೆ?

• ಕಲ್ಯಾಣ ಕರ್ನಾಟಕ ವೃಂದ : 31

• RPC : 216

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು ವೇತನ 90200/- ರಿಂದ 1,59200/- ವರೆಗೆ

ಅರ್ಜಿ ಹೇಗೆ ಅರ್ಜಿ ಹಾಕೋದು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಸಲ್ಲಿಸುವ ಕೆಳಗಡೆ ಹಂತ ಹಂತವಾಗಿ ಕೊಡಲಾಗಿದೆ ನೋಡಿ.

  •  KEA ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು.
  •  Register ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಹೆಸರು ವಿಳಾಸ ಸರಿಯಾಗಿ ತುಂಬಿ.
  •  Login ಬಟನ್ ಮೇಲೆ ಒತ್ತಿ ಅಲ್ಲಿ ರಿಜಿಸ್ಟರ್ ಸಂಖ್ಯೆ ಮತ್ತು ಜನ್ಮ ದಿನಾಂಕ ಸರಿಯಾಗಿ ತುಂಬಬೇಕು.
  •  ಅರ್ಜಿ ಶುಲ್ಕ ಹಾಗೂ ದಾಖಲೆಗಳನ್ನು ಸರಿಯಾಗಿ ತುಂಬಬೇಕು ಆ ಅಪ್ಲೋಡ್ ಮಾಡಿ.
  •  ಮತ್ತೊಮ್ಮೆ ಎಲ್ಲ ಮಾಹಿತಿಗಳನ್ನು ಸರಿಯಾಗಿ ಪರಿಶೀಲಿಸಿ, ಸರಿ ಇದ್ರೆ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು:

ಕರ್ನಾಟಕ ಕಾಲೇಜಿನಲ್ಲಿ ಕರೆದಿರುವ ಪ್ರಾಂಶುಪಾಲರ ಹುದ್ದೆ ಬಗ್ಗೆ ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಟೆಲಿಗ್ರಾಂ ಬೇಟಿ ಕೊಡಿ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ಹೇಳೋದಿಲ್ಲ.