ಗೃಹರಕ್ಷಕ ಹುದ್ದೆಗಳಿಗೆ ನೇಮಕಾತಿ 2026 : 10ನೇ ತರಗತಿ ಮುಗಿಸಿದವರಿಗೆ ಭರ್ಜರಿ ಗುಡ್ ನ್ಯೂಸ್ – Karnataka Home Guard recruitment 2026 : ಹೊಸ ಅಧಿಸೂಚನೆ ಪ್ರಕಟ ಅರ್ಜಿ ಹೇಗೆ ಹಾಕೋದು? ದಾಖಲೆಗಳು ಹೇಗೆ ಸಂಪೂರ್ಣ ಮಾಹಿತಿ ತಿಳಿಯಲು ಪೂರ್ತಿ ಲೇಖನಿ ಓದಿ!
ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು, ಮಂಡ್ಯ ಹಾಗೂ ಶಿವಮೊಗ್ಗ ದಾವಣಗೆರೆ, ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಹಿಳೆಯರಿಗೆ ಪುರುಷರಿಗೆ ಅವಕಾಶ 07 ನವೆಂಬರ್ 2026 ವರೆಗೆ ಅವಕಾಶ ನೀಡಲಾಗಿದೆ ಆಸಕ್ತಿ ಇದ್ದ ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಹಾಕಬಹುದು.
ಗೃಹರಕ್ಷಕ ದಳ ನೇಮಕಾತಿ ವಿವರ :
ಸಂಸ್ಥೆ : ಗೃಹರಕ್ಷಕ ದಳ ಬೆಂಗಳೂರು
ಒಟ್ಟು ಹುದ್ದೆ : ವಿವಿಧ ಹುದ್ದೆಗಳು( ಅಂಕಿ ಅಂಶ ನಿರ್ದಿಷ್ಟ ಪಡಸಲ್ಲ)
ಅರ್ಜಿ ವಿಧಾನ : ಆಫ್ಲೈನ್
ಕೊನೆಯ ದಿನಾಂಕ : 07-11-2026
ಯಾರಿಗೆ ಅವಕಾಶ : ಮಹಿಳೆಯರಿಗೆ ಪುರುಷರಿಗೆ
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆಯನ್ನು? ( Posts & Qualification):
ಬೆಂಗಳೂರು ಉತ್ತರ ಜಿಲ್ಲೆ ಬೆಂಗಳೂರಿನಲ್ಲಿರುವ ಸ್ವಯಂಸೇವಕ ಗೃಹರಕ್ಷಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಇದಕ್ಕೆ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ( SSLC ) ಪೂರ್ಣಗೊಳಿಸಿರಬೇಕು.
ವಯಮಿತಿ ವಿವರ ( Age limit ):
ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಹಾಕಲು ಕನಿಷ್ಠ 19 ವರ್ಷ ಇರಬೇಕು ಹಾಗೂ ಗರಿಷ್ಠ 50 ವರ್ಷದ ಒಳಗಡೆ ಇರಬೇಕು.
ಅರ್ಜಿ ಶುಲ್ಕ ( Application Fees):
ಈ ನೇಮಕಾತಿಗೆ ಯಾವುದೇ ಶುಲ್ಕ ಇರೋದಿಲ್ಲ.
- OBC , ಸಾಮಾನ್ಯ ವರ್ಗ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ₹0/-
- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ : ₹0/-
ಅನುಭವ :
ಅಧಿಕೃತ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಪ್ರೆಶರ್ ಮತ್ತು ಅನುಭವ ಹೊಂದಿದವರು ಅರ್ಜಿ ಹಾಕಿ ಹೆಚ್ಚಿನ ಮಾಹಿತಿಗೆ ಒಮ್ಮೆ ಅದುಸೂಚನೆ ಓದಿ.
ಬೆಂಗಳೂರು ಉತ್ತರ ಜಿಲ್ಲೆ ಗೃಹರಕ್ಷಕ ದಳ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಯಾವ ಜಿಲ್ಲೆಯಲ್ಲಿ ನೇಮಕಾತಿ ( Karnataka District):
ಹೌದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸ್ವಯಂಸೇವಕ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಉದಾಹರಣೆ ಬೆಂಗಳೂರು ಹಾಗೂ ಬೆಳಗಾವಿ ಮತ್ತು ಮಂಡ್ಯ ಧಾರವಾಡ ಮೈಸೂರು ಶಿವಮೊಗ್ಗ ಹಾಗೂ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ಮಾಡಲಾಗುತ್ತಿದೆ ನಿಮ್ಮ ಜಿಲ್ಲೆಯ ಗೃಹರಕ್ಷಕ ದಳ ಇಲಾಖೆ ಸಂಸ್ಥೆಗೆ ಭೇಟಿ ಕೊಟ್ಟು ಅರ್ಜಿ ನಮೂನೆ ತುಂಬಿ ಮಾಹಿತಿಗಳನ್ನು ಕೇಳಿ ಪಡೆದುಕೊಂಡು ಅರ್ಜಿಗಳು ಸಲ್ಲಿಸಿ.
ಯಾರಿಗೆ ಅವಕಾಶ :
ಮಹಿಳೆಯರು ಮತ್ತು ಪುರುಷರು ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಅಂದರೆ ಈಗ ಕರೆದಿರುವುದು ಬೆಂಗಳೂರುನಲ್ಲಿ ಉತ್ತರ ಜಿಲ್ಲೆಯ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಈ ರೀತಿಯಾಗಿ Noticeನಲ್ಲಿ ನೀಡಲಾಗಿದೆ.
ಆಯ್ಕೆ ವಿಧಾನ :
- ದಾಖಲೆಗಳ ಪರಿಶೀಲನೆ
- ಆರೋಗ್ಯ ಉತ್ತಮ ಇರಬೇಕು ಮತ್ತು ದೈಹಿಕವಾಗಿ ಉತ್ತಮ ಇರಬೇಕು
- ಸಂದರ್ಶನ & ಮೆರಿಟ್
ಈ ಕೆಲಸ ಖಾಯಂ ಇರುತ್ತಾ?
ಗೃಹರಕ್ಷಕ ದಳ ಸಂಸ್ಥೆಯು ಸ್ವಯಂಸೇವಕ ಹುದ್ದೆಗಳಿಗೆ 3 ವರ್ಷದವರೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಅನುಮತಿ ನೀಡಿರುತ್ತದೆ ಇದು ಖಾಯಂ ಹುದ್ದೆ ಇರೋದಿಲ್ಲ ತಾತ್ಕಾಲಿಕ ಸೇವೆ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು ( Important Dates):
ಆಫ್ ಲೈನ್ ಮೂಲಕ ಅರ್ಜಿ 27-10-2026 ರಿಂದ 07-11-2026 ವರೆಗೆ ಅವಕಾಶ ನೀಡಲಾಗಿದೆ. ಆಫ್ ಲೈನ್ನಲ್ಲಿ ಅರ್ಜಿ ನಮೂನೆ ಸಿಗುವ ಸಮಯ : ಮಧ್ಯಾಹ್ನ 2:30 ರಿಂದ ಸಂಜೆ 5:00 ವರೆಗೆ ಸಿಗುತ್ತದೆ.
ಅರ್ಜಿ ವಿತರಿಸುವ ಪ್ರಾರಂಭ ದಿನಾಂಕ : ಅಕ್ಟೋಂಬರ್ 27 ರಿಂದ
ಅರ್ಜಿ ವಿತರಿಸುವ ಸ್ಥಳ :
ಬೆಂಗಳೂರು ಉತ್ತರ ಜಿಲ್ಲೆ ವೆಸ್ಟ್ ಆಫ್ ಕಾರ್ಡ್ ರಸ್ತೆ ಅಗ್ನಿಶಾಮಕ ಠಾಣೆ ಪಕ್ಕ ರಾಜಾಜಿನಗರ ಬೆಂಗಳೂರು 560010
ಅರ್ಜಿ ಹೇಗೆ ಹಾಕೋದು?
ಮೇಲೆ ಕೊಟ್ಟಿರುವ ಅರ್ಜಿ ವಿಳಾಸಕ್ಕೆ ಭೇಟಿಕೊಟ್ಟು ಅರ್ಜಿ ನಮೂನೆ ತೆಗೆದುಕೊಂಡು ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಿ ನಂತರ ಅದೇ ಜಾಗದಲ್ಲಿ ಅರ್ಜಿ ನಮೂನೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಳಿಗೆ ತಮ್ಮ ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಗ್ರಹರಕ್ಷಕ ದಳ ಸಂಸ್ಥೆಗೆ ಭೇಟಿಕೊಟ್ಟು ಇನ್ನಷ್ಟು ಹೆಚ್ಚೆನ್ ಮಾಹಿತಿಗಳನ್ನು ಪಡೆದುಕೊಳ್ಳಿ.
ಪ್ರಶಾಂತ್ ಮೀಡಿಯಾ )
ಸ್ನೇಹಿತರೆ ನಮಸ್ಕಾರ ಈ ಅಂತರ್ಜಾಲದಲ್ಲೇ ಪ್ರತಿನಿತ್ಯ ವಾಗಿ ಮಾಹಿತಿಗಳು ಬರುತ್ತದೆ ಇಲ್ಲಿ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ನೀಡುವುದಿಲ್ಲ ಈಗ ಮೇಲ್ಗಡೆ ಪ್ರಕಟಿಸಿರುವ ವರದಿ ನೀಡಿದ್ದೇವೆ ವೀಕ್ಷಿಸಿ. ತಪ್ಪು ಅಂತರ್ಜಾಲ ತಪ್ಪು ಮಾಹಿತಿಗಳು ಕೊಡುವ ಚಾನಲ್ ಅಂತರ್ಜಾಲಯಗಳುದಿಂದ ದೂರ ಇರಿ ಧನ್ಯವಾದಗಳು.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
