ಕರ್ನಾಟಕದಲ್ಲಿ 2026-27 ಸಾಲಿನ ಯೋಜನೆಗಳಿಗೆ ಅರ್ಜಿ ಆಹ್ವಾನ : ಯಾವೆಲ್ಲ ಯೋಜನೆ? ಸಂಪೂರ್ಣ ವಿವರ

ಕರ್ನಾಟಕದಲ್ಲಿ 2026-27 ಸಾಲಿನ ಯೋಜನೆಗಳಿಗೆ ಅರ್ಜಿ ಆಹ್ವಾನ, ಗಂಗಾ ಕಲ್ಯಾಣ ಯೋಜನೆ, ಸಾರಥಿ ಯೋಜನೆ, ಶಿಕ್ಷಣ ಮೇಲೆ ಸಾಲ, ಉದ್ಯೋಗ ಮಾಡಲು ಸಾಲ, ಹೀಗೆ ಇತರೆ ಯೋಜನೆಗಳಿಗೆ ಅರ್ಜಿ ಬೇಕಾಗುವ ದಾಖಲೆಗಳು? ಅರ್ಹತೆಗಳೇನಿರಬೇಕು? ಯಾವ ಯಾವ ಸಂಸ್ಥೆಗಳಲ್ಲಿ ಅರ್ಜಿ, ಹೀಗೆ ಎಲ್ಲ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಓದಿ,

ನೀವು ಈ ಯೋಜನೆಗಳಿಗಾಗಿ ಕಾಯುತ್ತಿದ್ದೀರಾ? ಹಾಗಾದ್ರೆ ಅರ್ಜಿ 31-08-2026 ರಿಂದ 30-06-2026 ವರೆಗೆ ಅವಕಾಶ ನೀಡಲಾಗಿದೆ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಉದ್ಯೋಗದ ಬಗ್ಗೆ ಮಾಹಿತಿಗೆ ಭೇಟಿ ಕೊಡಿ.

ಯಾವ ಯಾವ ವಿಭಾಗದಲ್ಲೇ( ನಿಗಮ) ಅರ್ಜಿ?

1. ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ನಿಯಮಿತ

2. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ

3. ಕರ್ನಾಟಕ ರಾಜ್ಯ ಕಾಡುಗೋಲ ಅಭಿವೃದ್ಧಿ ನಿಗಮ

4. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ

5. ಒಕ್ಕಲಿಗ ಸಮುದಾಯ ನಿಗಮ

ಹೀಗೆ ವಿವಿಧ ಪ್ರಕಾರ ನಿಗಮ ನಿಯಮಿತದಲ್ಲಿ ಯೋಜನೆಗಳಿಗೆ ಅರ್ಜಿ ಆಹ್ವಾನ ಮಾಡಿದೆ ಸರ್ಕಾರ ಈ ಎಲ್ಲಾ ನಿಗಮಗಳು ಕರ್ನಾಟಕ ರಾಜ್ಯ ಸರ್ಕಾರ ಉದ್ಯಮಗಳು ಆಗಿದೆ.

ಈ ಯೋಜನೆಗಳಲ್ಲಿ ಏನೆಲ್ಲ ಸೌಲಭ್ಯ ಸಿಗುತ್ತಾ? ಮತ್ತು ಯೋಜನೆಗಳು ಯಾವವು?

ಉದ್ಯೋಗ ಮಾಡಲು ಸಾಲ :

ಹೌದು ಕರ್ನಾಟಕದಲ್ಲಿ ಯಾವುದೇ ಕೆಲಸ ಮಾಡಲು ಸಾಲ ನೀಡಲಾಗುತ್ತಿದೆ ಉದಾಹರಣೆಗೆ ವ್ಯಾಪಾರ ಅಂಗಡಿ ಹಾಗೂ ಸ್ವಯಂ ವಾಹನ ಹಾಗೂ ಇತರೆ ಉದ್ಯೋಗಗಳಿಗೆ

ಗಂಗಾ ಕಲ್ಯಾಣ ಯೋಜನೆ :

ರೈತರಿಗೆ ಹಾಗೂ ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರಿಗೆ ಬೋರ್ವೆಲ್ ತೆಗೆಯಲು ಸರ್ಕಾರದಿಂದ ಸಾಲದ ರೂಪದಲ್ಲಿ ಅಮೌಂಟ್ ಒದಗಿಸುತ್ತಾರೆ

ಶೈಕ್ಷಣಿಕ ಮೇಲೆ ಸಾಲ ಹಾಗೂ ವಿದೇಶ ಶಿಕ್ಷಣ ಸಾಲ :

ಹೌದು ಸಣ್ಣ ಮಕ್ಕಳಿಗೆ ಮತ್ತು ಹಾಗೂ ಶಾಲಾ ಕಾಲೇಜು ಮಟ್ಟದಲ್ಲಿ ಓದುತ್ತಿರುವವರು ಮತ್ತು ವಿದೇಶದಲ್ಲಿ ಹೋಗಿ ಓದುತ್ತಿರುವವರಿಗೆ ಸಾಲವನ್ನ ಒದಗಿಸಲಾಗುತ್ತದೆ ಈ ಯೋಜನೆಗಳ ಉದ್ದೇಶ ಒಳ್ಳೆ ಶಿಕ್ಷಣ ಕಲಿಬೇಕು ಒಳ್ಳೆ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ತಲುಪಬೇಕು ಅನ್ನೋದೇ ಉದ್ದೇಶ

ಸಾರಥಿ ಯೋಜನೆ :

ನೋಡಿ ಮೂರು ಚಕ್ರದ ವಾಹನ ಹಾಗೂ ನಾಲ್ಕು ಚಕ್ರದ ವಾಹನ ಖರೀದಿ ಮಾಡಲು ಸಾಲ ಒದಗಿಸಲಾಗುತ್ತದೆ

ಇಲ್ಲಿ ಗಮನಿಸಿ : ನೋಡಿ ರೈತ ಬಾಂಧವರೇ ಹಾಗೂ ಎಲ್ಲಾ ಉದ್ಯೋಗ ಹುಡುಕುತ್ತಿರುವರು ಹಾಗೂ ನಮ್ಮ ಎಲ್ಲಾ ಕರ್ನಾಟಕದವರು ಈ ಯೋಜನೆಗಳ ಉದ್ದೇಶ ನಿಮಗೆ ಸಾಲ ಒದಗಿಸುವುದು ಒಳ್ಳೆಯ ಉದ್ದೇಶವಾಗಿದೆ ಇನ್ನಷ್ಟು ನೋಟಿಫಿಕೇಶನ್ ನೀವು ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ.

ಬೇಕಾಗುವ ದಾಖಲೆಗಳು :

  •  ಯಾವ ಕಾರಣಕ್ಕಾಗಿ ಸಾಲ ಪಡೆಯುತ್ತಿದ್ದರೆ ಪ್ರಮಾಣ ಪತ್ರ
  •  ಆಧಾರ್ ಕಾರ್ಡ್
  •  ಫೋಟೋ
  •  ಸಾಲದ ಪುರಾವೆಗಳು
  •  ರೈತರಿಗೆ ಜಮೀನಿನ ಪಹಣಿ ಹಾಗೂ ಜಮೀನಿನ ಪ್ರಮಾಣ ಪತ್ರಗಳು( ಸಾಲ ಅಥವಾ ಗಂಗಾ ಕಲ್ಯಾಣ ಯೋಜನೆಗೆ)
  •  ಕರ್ನಾಟಕ ಪ್ರಮಾಣ ಪತ್ರ ವಾಸಸ್ಥಳ
  •  ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತ್ತೀಚಿನ
  •  ಹಾಗೂ ಇತರೆ ದಾಖಲೆಗಳು

ಯೋಜನೆಗಳಿಗೆ ಅರ್ಜಿ ಹಾಕಲು ಕಂಡಿಷನ್ಗಳು?

1. ಕನಿಷ್ಠ ಅರ್ಜಿದಾರರಿಗೆ 18 ವರ್ಷ ಹಾಗೂ ಗರಿಷ್ಠ 55 ವರ್ಷದ ಒಳಗಡೆ ಇರಬೇಕು.

2. ಈ ಹಿಂದೆ ಯಾವುದೇ ಸರ್ಕಾರಿ ಯೋಜನೆಯಲ್ಲಿ ಸಾಲ ಪಡೆದಿರಬಾರದು ಅಥವಾ ಕಟ್ಟುತ್ತಿರಬಾರದು.

3. ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು ಮತ್ತು ಕಾಯಂ ನಿವಾಸಿ ಆಗಿರಬೇಕು.

4. ವಾರ್ಷಿಕ ಆದಾಯ 1 ಲಕ್ಷದವರೆಗೆ ಇರಬೇಕು.

5. ಸರ್ಕಾರ ನೇಮಗೊಳಿಸಿರುವ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು.

6. ಸಾಲ ಕೊಡುವ ಸಮಯದಲ್ಲಿ ಮೀಸಲಾತಿ ಆಧಾರದ ಮೇಲೆ ಮಹಿಳೆಯರಿಗೆ ಪುರುಷರಿಗೆ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು :

ಆನ್ಲೈನ್ ನಲ್ಲಿ ಅರ್ಜಿ ಅಥವಾ ಆಫ್ ಲೈನ್ನಲ್ಲಿ ಅರ್ಜಿ ಹಾಕಲು ಪ್ರಾರಂಭ :31-08-2026

ಕೊನೆಯ ದಿನಾಂಕ : 30-09-2026

ಯೋಜನೆಗಳ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದಲ್ಲಿ ಕರೆದಿರುವ ಎಲ್ಲ ಯೋಜನೆ ಬಗ್ಗೆ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಶಾಂತ್ ಮೀಡಿಯಾ ಸಲಹೆಗಳು

ನೋಡಿ ಸ್ನೇಹಿತರೆ ಯಾರಿಗೆ ಸಾಲ ಬೇಕು ತೆಗೆದುಕೊಳ್ಳಿ ಮತ್ತು ಕಟ್ಟಲು ನಿಮ್ಮ ಬಳಿ ಆಸಕ್ತಿ ಇದ್ದರೆ ತೆಗೆದುಕೊಳ್ಳಿ ಯಾಕೆಂದರೆ ಸಾಲ ತೆಗೆದುಕೊಳ್ಳುವಾಗ ಖುಷಿ ಇರುತ್ತೆ ಆದರೆ ಅದು ಹಿಂದಕ್ಕೆ ಕೊಡುವಾಗ ತುಂಬಾ ಕಷ್ಟ ಆದಕಾರಣ ವಿಚಾರ ಮಾಡಿ ಯೋಜನೆಗಳಿಗೆ ಅರ್ಜಿ ಹಾಕಬಹುದು

ಅರ್ಜೆ ಹಾಕುವುದು ಹೇಗೆ?

ಅರ್ಜಿ ಆನ್ಲೈನ್ನಲ್ಲಿ ಅಥವಾ ಆಫ್ಲನ್ನಲ್ಲಿ ಹಾಕಬಹುದು ಕೆಳಗಡೆ ಹಂತ ಹಂತದಲ್ಲಿ ಕೊಡಲಾಗಿದೆ ನೋಡಿ.

1. ಅಧಿಕೃತ ಸೇವಾ ಸಿಂಧು ಪೊರಟದಲ್ಲಿ ಅರ್ಜಿ.

2. ರಿಜಿಸ್ಟರ್ ಬಟನ್ ಮೇಲೆ ಒತ್ತಿ ಸರಿಯಾಗಿ ಹೆಸರು ವಿಳಾಸ ದಾಖಲೆಗಳ ಸಮೇತ ರೆಜಿಸ್ಟರ್ ಮಾಡಿ.

3. Login ಬಟನ್ ಮೇಲೆ ಒತ್ತಿ ಎಲ್ಲ ಮಾಹಿತಿಗಳು ನಿಮ್ಮ ವೈಯಕ್ತಿಕ ಮಾಹಿತಿಗಳು ಸಲ್ಲಿಸಿ.

4. ದಾಖಲೆಗಳು ಮತ್ತು ಶುಲ್ಕ ಕೇಳಿದರೆ ಮಾತ್ರ ಪಾವತಿಸಿ

5. ಕೊನೆಯಲ್ಲಿ ಯೋಜನೆಗಳ ಬಗ್ಗೆ ಪ್ರಿಂಟ್ ಬರುತ್ತೆ ಯಾವ ಯೋಜನೆಗೆ ಅಪ್ಲಿಕೇಶನ್ ಹಾಕಿದ್ದಾರೆ ಅದನ್ನ ನಿಮ್ಮ ಬಳಿ ತೆಗೆದುಕೊಳ್ಳಿ